ಬೆಂಗಳೂರು, ಮಾ.25 (DaijiworldNews/MB) : ''ಕೊರೊನಾ ಕಾರಣದಿಂದಾಗಿ ಸಿನಿಮಾ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ ಎಂದು ನಮಗೆ ತಿಳಿದಿದೆ. ಆದರೆ ಕನಿಷ್ಟ ಎರಡು ತಿಂಗಳಾದರೂ ಸಿನಿಮಾ ರಂಗ ನಮಗೆ ಸಹಕಾರ ನೀಡಬೇಕು'' ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಸಿನಿಮಾಮಂದಿರಗಳಲ್ಲಿ ಶೇ. 50 ರಷ್ಟು ಸೀಟು ಭರ್ತಿ ವಿಚಾರದಲ್ಲಿ ನಾವು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಕಾರಣದಿಂದ ಕಷ್ಟವಾದರೂ ಸಿನಿಮಾ ಕ್ಷೇತ್ರ ಸಹಕರಿಸಬೇಕು'' ಎಂದು ಹೇಳಿದ್ದಾರೆ.
''ಜನರು ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ನಾವು ಇಂದು ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ತಿಳಿಸಿದರು.
ಇನ್ನು, ''45 ವರ್ಷದ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು'' ಎಂದು ಹೇಳಿದರು.