ಮುಂಬೈ, ಮಾ.25 (DaijiworldNews/PY): "ದೇಶದ ಆರ್ಥಿಕ ಚೇತರಿಕೆ ಮೇಲೆ ಕೊರೊನಾ ಎರಡನೇ ಅಲೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

"ದೇಶದಲ್ಲಿ ಹರಡುತ್ತಿರುವ ಕೊರೊನಾದ ಎರಡನೇ ಅಲೆಯಿಂದ ಆರ್ಥಿಕತೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. 2022ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆರ್ಬಿಐನ ಶೇ.10.05ರ ಅಭಿವೃದ್ದಿ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ" ಎಂದಿದ್ದಾರೆ.
"ಕಳೆದ ವರ್ಷದಂತೆ ಈ ಬಾರಿ ದೇಶದಾದ್ಯಂತ ಲಾಕ್ಡೌನ್ ಜಾರಿಯಾಗುವ ಸಂಭವ ಕಂಡುಬರುತಿಲ್ಲ" ಎಂದು ಹೇಳಿದ್ದಾರೆ.
ದೇಶದ ಹಲವು ಭಾಗಗಳಲ್ಲಿ 50ಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿ ತಿಳಿಸಿದೆ.