ಬೆಂಗಳೂರು, ಮಾ. 26(DaijiworldNews/HR): ಸಿ.ಡಿ ಪ್ರಕರಣದ ಯುವತಿಯು ನನ್ನ ವಿರುದ್ಧ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ, ಅದೆಲ್ಲದಕ್ಕೂ ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಯುವತಿಯು ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, " ಯುವತಿಯು ಇಡೀ ಜಗತ್ತಿಗೇ ತನ್ನ ಬೆತ್ತಲೇ ಫೋಟೋ ಪ್ರದರ್ಶಿಸಿ ನನ್ನ ವಿರುದ್ಧ ಹೇಳಿಕೆ ನೀಡುವುದು ದೊಡ್ಡ ವಿಷಯವಲ್ಲ. ನಾನು ಇದಕ್ಕೆ ಹೆದರುವುದಿಲ್ಲ. ಎಲ್ಲವನ್ನು ಎದುರಿಸುತ್ತೇನೆ" ಎಂದರು.
ಇನ್ನು "ಯುವತಿಯು ಕೇಸ್ ದಾಖಲಿಸುತ್ತಿರುವ ಬಗ್ಗೆ ನಾನು ವಕೀಲರನ್ನು ಭೇಟಿ ಮಾಡಿ ಚರ್ಚಿಸಲಿದ್ದು, ಈ ಸಂಬಂಧ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.