ಬೆಂಗಳೂರು, ಮಾ.26 (DaijiworldNews/PY): "ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ತಾಯಿ ಇನ್ನೂ ಒಂದು ತಿಂಗಳ ನಂತರ ಇನ್ನೇನು ಬಿಡುಗಡೆ ಮಾಡುತ್ತಾಳೋ ನೋಡೋಣ" ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಡಿ ಲೇಡಿಯ ಮೂರನೇ ವಿಡಿಯೋ ಹೇಳಿಕೆ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಆಗಿ ಇಷ್ಟು ದಿನ ಆಗಿದೆ. ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಇನ್ನೂ ಒಂದು ತಿಂಗಳ ಬಳಿಕ ಆ ತಾಯಿ ಇನ್ನು ಏನನ್ನು ಬಿಡುಗಡೆ ಮಾಡುತ್ತಾಳೋ ನೊಡೋಣ" ಎಂದಿದ್ದಾರೆ.
"ಈಗ ಎಸ್ಐಟಿ ತನಿಖೆ ನಡೆಸುತ್ತಿದೆ.ಹಾಗಾಗಿ ಈ ಹಂತದಲ್ಲಿ ಮಾತನಾಡುವುಸುದು ಸರಿಯಲ್ಲ. ಈಗ ಈ ವಿಚಾರದ ಬಗ್ಗೆ ಮಾತನಾಡಿದರೆ ಹಿಂಟ್ ಬಿಟ್ಟುಕೊಟ್ಟ ಹಾಗೆ ಆಗುತ್ತದೆ. ಈ ಪ್ರಕರಣದಲ್ಲಿ ತನಿಖೆ ಮುಗಿಯುವ ತನಕ ಆ ವಿಚಾರದ ಬಗ್ಗೆ ಮಾತನಾಡದಿರುವುದು ಸೂಕ್ತ" ಎಂದು ತಿಳಿಸಿದ್ದಾರೆ.
"ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇಂದು ಮೂರನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದ ಜನತೆ, ಪೋಷಕರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರ ಹಾಗೂ ಎಲ್ಲಾ ಸಂಘಟನೆಗಳ ಬೆಂಬಲ ನನಗೆ ಸಿಗುತ್ತದೆ" ಎಂದಿದ್ದಾರೆ.
"ನಾನು 24 ದಿನಗಳಿಂದ ಪ್ರಾಣ ಭಯದಲ್ಲಿ ಬದುಕುತ್ತಾ ಇದ್ದೇನೆ. ನನಗೆ ಬೆಂಬಲ ನೀಡುತ್ತಿದ್ದೀರಾ ಎನ್ನುವ ಕಾರಣದಿಂದ ನಾನು ಇಂದು ವಕೀಲರ ಮೂಲಕ ರಮೃಶ್ ಜಾರಕಿಹೊಳಿ ಅವರ ವಿರುದ್ದ ದೂರು ಸಲ್ಲಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಯುವತಿ ಪರ ವಕೀಲ ಜಗದೀಶ್ ಮಾತನಾಡಿ, "ಇಂದು ಮಧ್ಯಾಹ್ನ 2.30ಕ್ಕೆ ಯುವತಿ ಪೊಲೀಸ್ ಕಮೀಷನರ್ ಅವರಿಗೆ ಲಿಖಿತ ದೂರು ನೀಡುತ್ತೇನೆ" ಎಂದಿದ್ದಾರೆ.