ನವದೆಹಲಿ, ಮಾ.26 (DaijiworldNews/PY): ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸ್ಥಳೀಯ ಬಳಕೆಗಾಗಿ ದೇಶೀಯವಾಗಿ ತಯಾರಿಸಿರುವ ಲಸಿಕೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಪ್ರಾತಿನಿಧಿಕ ಚಿತ್ರ
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಎಪ್ರಿಲ್ 1ರಿಂದ ಕೊರೊನಾ ಲಸಿಕೆ ನೀಡುವ ಅಭಿಯಾನ ಪ್ರಾರಂಭವಗಲಿದ್ದು, ಈ ಅಭಿಯಾನಕ್ಕೆ ಲಸಿಕೆಯ ಕೊರೆತ ಆಗಬಾರದು ಎಂಬ ನಿಟ್ಟಿನಲ್ಲಿ ತಾತ್ಕಲಿಕವಾಗಿ ಲಸಿಕೆ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
"ಕೊರೊನಾ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆ ಇದು ಅಗತ್ಯ ಎಂದು ಜಾಗತಿಕ ಲಸಿಕೆ ಮೈತ್ರಿ ವಿಭಾಗ ಒಪ್ಪುತ್ತಿದ್ದು, ಈಗಿನ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಲಸಿಕೆ ಬಳಕೆ ಅನಿವಾರ್ಯವಾಗಿದೆ. ಎಪ್ರಿಲ್ನಲ್ಲಿ ಸುಮಾರು 50 ಮಿಲಿಯನ್ ಲಸಿಕೆ ದೊರಕುವುದು ಈಗ ಅನುಮಾನ" ಎಂದು ತಿಳಿಸಿದೆ.
ಈ ಹಿನ್ನೆಲೆ ಸೌದಿ ಅರೇಬಿಯಾ, ಬ್ರಿಟನ್, ಮೊರಾಕೊ, ಬ್ರೆಜಿಲ್ ಹಾಗೂ ನೇಪಾಳ ದೇಶಗಳು ಯುನೆಸ್ಕೊ ಮುಖೇನ ಭಾರತದ ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡುವಂತೆ ಮನವಿ ಮಾಡಿದೆ.