ನವದೆಹಲಿ, ಏ. 14 (DaijiworldNews/SM): ದೇಶದಲ್ಲಿ ನಿತ್ಯ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಕಳವಳ ವ್ಯಕ್ತಪಡಿಸಿದೆ.

ರಾಜಕೀಯ ಸಮಾವೇಶ, ಧಾರ್ಮಿಕ ಸಭೆಗಳು, ರೈತರ ಚಳುವಳಿಗಳು ಕೊರೋನಾ ಪ್ರಕರಣಗಳು ವೇಗವಾಗಿ ಹರಡಲು ಕಾರಣವಾಗಿವೆ. ವಿಧಾನಸಭಾ ಚುನಾವಣೆಗಳು, ಕುಂಭಮೇಳ, ರೈತರ ಪ್ರತಿಭಟನೆಗಳ ಬಗ್ಗೆ ಪರೋಕ್ಷವಾಗಿ ತಾಂತ್ರಿಕ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ, ದೇಶದಲ್ಲೇ ಕೊರೋನಾ ಸೋಂಕಿನ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸಣ್ಣ ಸಭೆಗಳು, ಪಾರ್ಟಿಗಳಲ್ಲಿ ಜನರು ಭಾಗವಹಿಸುತ್ತಿದ್ದಾರೆ. ಅಲ್ಲದೆ, ಇವುಗಳ ಜೊತೆಗೆ ಸಮಾವೇಶಗಳು ಕೂಡ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ. ಸ್ಥಳೀಯವಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದ್ದು, ಲಾಕ್ ಡೌನ್ ಮಾಡುವ ಅಗತ್ಯವಿಲ್ಲ ಎಂದುತಾಂತ್ರಿಕ ಸಮಿತಿ ತಿಳಿಸಿದೆ.