ನವದೆಹಲಿ, ಏ.15 (DaijiworldNews/MB) : ಪಾಕಿಸ್ತಾನದ ಪ್ರಚೋದನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಿಲಿಟರಿ ಬಲದಿಂದಲ್ಲೇ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು ಎಂದು ಭಾರತ-ಪಾಕಿಸ್ತಾನ ನಡುವಿನ ಸಂಬಂಧದ ಬಗ್ಗೆ ಅಮೇರಿಕಾದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಕಚೇರಿ ಹೇಳಿದೆ.

ಈ ಬಗ್ಗೆ ಅಮೇರಿಕಾದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಕಚೇರಿ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಭಾರತದ ಮಿಲಿಟರಿ ಬಲದ ಕುರಿತು ವಿಶ್ಲೇಷಣೆ ಮಾಡಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.
ಈ ಉಭಯ ರಾಷ್ಟ್ರಗಳಿಗೆ ಕಾಶ್ಮೀರವೇ ಮುಖ್ಯ ವಿವಾದದ ಕೇಂದ್ರಬಿಂದುವಾಗಿದೆ. ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನ ಕಾಶ್ಮೀರಿ ಉಗ್ರರಿಗೆ ನೆರವು ನೀಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಭಾರತ-ಪಾಕ್ ನಡುವೆ ನೇರ ಯುದ್ದ ನಡೆಯದಾದರೂ. ಆದರೆ ಭಾರತ ಪಾಕ್ ನಡುವೆ ಬಿಕ್ಕಟ್ಟು ಮತ್ತಷ್ಟು ಅಧಿಕವಾಗುವ ಸಾಧ್ಯತೆಯಿದೆ. ಪಾಕಿಸ್ತಾನ ಕಾಶ್ಮೀರಿ ಉಗ್ರರಿಗೆ ನೆರವು ನೀಡಿದರೆ ಉಭಯ ರಾಷ್ಟ್ರಗಳ ನಡುನಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅಭಿಪ್ರಾಯಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಉಭಯ ರಾಷ್ಟ್ರಗಳ ನಡುವೆ ದ್ವೇಷ ಅಧಿಕವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಿಲಿಟರಿ ಬಲ ಅಧಿಕಗೊಳಿಸುವತ್ತ ಅಧಿಕ ಗಮನಹರಿಸಿದ್ದು ಪಾಕ್ನ ಯಾವುದೇ ಪ್ರಚೋದನೆಗೆ ಮೋದಿ ಸರ್ಕಾರ ಮಿಲಿಟರಿ ಬಲದ ಮೂಲಕ ತಕ್ಕ ಉತ್ತರ ನೀಡುವ ಸಾಧ್ಯತೆಯಿದೆ. ಈ ಉಭಯ ರಾಷ್ಟ್ರಗಳ ಸಂಬಂಧ ತೀರಾ ಹದಗೆಟ್ಟಿದೆ. ಈ ರಾಷ್ಟ್ರಗಳು ತಮ್ಮ ತಮ್ಮ ರಾಯಬಾರಿಗಳನ್ನು ವಾಪಸ್ ಕರೆಸಿಕೊಂಡಿದ್ದಾರೆ.