ನವದೆಹಲಿ, ಎ.15 (DaijiworldNews/PY): "ಕೊರೊನಾ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಪ್ರಧಾನಮಂತ್ರಿ ನಿಧಿ ಏನಾಗಿದೆ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿಎಂ ಕೇರ್ ನಿಧಿಯ ಬಗ್ಗೆ ಪ್ರಶ್ನಿಸಿದ್ದಾರೆ

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ನಿಯಂತ್ರಣಕ್ಕೆ ಆಸ್ಪತ್ರೆಯಲ್ಲಿ ಯಾವುದೇ ಪರೀಕ್ಷೆ ಆಗುತ್ತಿಲ್ಲ. ಹಾಸಿಗೆಗಳಿಲ್ಲ, ಯಾವುದೇ ವೆಂಟಿಲೇಟರ್ಗಳಿಲ್ಲ, ಆಕ್ಸಿಜನ್ ಇಲ್ಲ. ಅಲ್ಲದೇ, ಲಸಿಕೆ ಕೂಡಾ ಸಮರ್ಪಕವಾಗಿಲ್ಲ" ಎಂದು ಕಿಡಿಕಾರಿದ್ದಾರೆ.
"ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಆದರೆ, ಸರ್ಕಾರ ಹಬ್ಬಗಳ ನೆಪಗಳನ್ನು ಹೇಳುತ್ತಿದೆ" ಎಂದಿದ್ದಾರೆ.
"ಕೊರೊನಾ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಪ್ರಧಾನಮಂತ್ರಿ ನಿಧಿ ಏನಾಗಿದೆ?. ದೇಶದಲ್ಲಿ ದಿನೇದಿನೇ ಕೊರೊನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸರ್ಕಾರ ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ" ಎಂದು ಹೇಳಿದ್ದಾರೆ.