ನವದೆಹಲಿ, ಏ.15 (DaijiworldNews/MB) : ಜಾಗತಿಕ ಮಟ್ಟದಲ್ಲಿ ತೈಲೋತ್ಪನ್ನಗಳ ದರ ಇಳಿಕೆ ಹಿನ್ನೆಲೆ ಭಾರತದಲ್ಲಿಯೂ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತ ಮಾಡಿದೆ. ಈ ನಿಟ್ಟಿನಲ್ಲಿ 15 ದಿನಗಳ ಬಳಿಕ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿರುವುದಾಗಿ ವರದಿಯಾಗಿದೆ.

15 ದಿನಗಳ ಹಿಂದೆ ಅಂದರೆ ಮಾರ್ಚ್ 30 ರಂದು ಪ್ರತಿ ಲೀಟರ್ಗೆ 22 ಪೈಸೆ ಮತ್ತು 23 ಪೈಸಾ ಇಳಿಕೆಯಾಗಿತ್ತು. ಈಗ ಮತ್ತೆ 15 ದಿನದ ಬಳಿಕ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ.
ಪ್ರತೀ ಲೀಟರ್ ಪೆಟ್ರೋಲ್ ದರ 16 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರ 14 ಪೈಸೆ ಇಳಿಕೆಯಾಗಿದ್ದು ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 90.40 ರೂ.ಗೆ ಹಾಗೂ ಡೀಸೆಲ್ ಪ್ರತೀ ಲೀಟರ್ ಗೆ 80.73 ರೂಗೆ ಇಳಿದಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್ಗೆ 65 ಡಾಲರ್ಗಿಂತಲೂ ಕಡಿಮೆಗೆ ಕುಸಿದಿದ್ದು ಇದು ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಪರಿಷ್ಕರಣೆಗೆ ಕಾರಣ ಎಂದು ಹೇಳಲಾಗಿದೆ.
2021 ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 26 ಪಟ್ಟು ಅಧಿಕವಾಗಿದೆ ಎಂದು ವರದಿಯಾಗಿದೆ.