ಶಿವಮೊಗ್ಗ, ಎ.15 (DaijiworldNews/PY): "ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದ ಏಕವಚನ ಪದ ಬಳಸುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ನಾನು ಸಿದ್ದರಾಮಯ್ಯ ಅವರನ್ನು ಲೇ ಸಿದ್ದರಾಮುಯ್ಯ ಎಂದರೆ ಹೇಗಿರುತ್ತೆ?" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು. ಆದರೂ ಅವರಿಗೆ ಯಾರನ್ನು ಹೇಗೆ ಮಾತನಾಡಿಸಬೇಕು ಎನ್ನುವುದೇ ತಿಳಿದಿಲ್ಲ. ನಾನು ಅವರನ್ನು ಏಕವಚನದಲ್ಲಿ ಕರೆದರೆ ಹೇಗಿರುತ್ತೆ" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಸಿದ್ದರಾಮಯ್ಯ ಅವರನ್ನು ವಿದೂಷಕ ಎಂದು ಕರೆದಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು. ಅವರಿಗೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿದೇ ಇಲ್ಲ. ಮೊದಲು ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಿರಿ. ನನಗೂ ಲೇ ಸಿದ್ದರಾಮಯ್ಯ ಎಂದು ಕರೆಯುಲು ಬರುವುದಿಲ್ಲವೇ?. ಆದರೆ, ನಾನು ಆ ಪದವನ್ನು ಬಳಕೆ ಮಾಡುವುದಿಲ್ಲ" ಎಂದಿದ್ದಾರೆ.
"ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದ ಸಂದರ್ಭ ಎಷ್ಟು ಕೋಟಿ ಹಣ ಪಡೆದಿದ್ದರು?. ಹಾಗಾದರೆ ಅವರು ಪಕ್ಷಾಂತರ ಮಾಡಿಲ್ಲವೇ?. ರಾಜಕಾರಣ ಎಂದರೆ ಪಕ್ಷಾಂತರ ಇದ್ದೇ ಇರುತ್ತದೆ. ಇದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.