ಬೆಂಗಳೂರು, ಎ.16 (DaijiworldNews/PY): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದ್ದು, "ಲಾಕ್ ಡೌನ್ ಬಗ್ಗೆ ಸರ್ಕಾರ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ದ್ವಂಧ್ವ ಹೇಳಿಕೆಗಳನ್ನು ನೀಡದೆ ಸ್ಪಷ್ಟ ಸಂದೇಶವನ್ನು ರಾಜ್ಯಕ್ಕೆ ನೀಡಬೇಕು" ಎಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಲಾಕ್ ಡೌನ್ ಬಗ್ಗೆ ಸರ್ಕಾರ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ದ್ವಂಧ್ವ ಹೇಳಿಕೆಗಳನ್ನು ನೀಡದೆ ಸ್ಪಷ್ಟ ಸಂದೇಶವನ್ನು ರಾಜ್ಯಕ್ಕೆ ನೀಡಬೇಕು. ಲಾಕ್ಡೌನ್ ಕೊರೊನಗಿಂತಲೂ ಭೀಕರವಾದುದು ಎನ್ನುವ ಕಹಿಸತ್ಯ ಹಿಂದಿನ ಅನುಭವದಿಂದ ತಿಳಿದಿದೆ. ವಲಸೆ ಕಾರ್ಮಿಕರಿಂದ ಹಿಡಿದು ಕೈಗಾರಿಕೆಗಳು, ಕಂಪೆನಿಗಳವರೆಗೆ ಲಾಕ್ಡೌನ್ಗೆ ಒಗ್ಗುವುದು ಕಷ್ಟಕರವಾಗಲಿದೆ" ಎಂದು ತಿಳಿಸಿದೆ.