ಬೆಂಗಳೂರು, ಏ.16 (DaijiworldNews/HR): "ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಒಂದೂವರೆ ಗಂಟೆ ಕಾಲ ತಜ್ಞರ ಜತೆ ಚರ್ಚಿಸಿದ್ದು, ಏಪ್ರಿಲ್ 20ರವರೆಗೆ ಈಗಿನಂತೆಯೇ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಿನಂತೆಯೇ ನೈಟ್ ಕರ್ಫ್ಯೂ 20ರವರೆಗೆ 8 ನಗರಗಳಲ್ಲಿ ಮುಂದುವರಿಯಲಿದ್ದು, ಉಳಿದಂತೆ ಬೇರೆ ಯಾವುದೇ ತೀರ್ಮಾನವನ್ನು ಇಂದು ಕೈಗೊಂಡಿಲ್ಲ. ವಾರದ ಬಳಿಕ ಕುಳಿತು ಮತ್ತೊಮ್ಮೆ ಚರ್ಚೆ ಮಾಡಿ ಪ್ರಧಾನಿ ಮೋದಿಯವರ ಸಲಹೆಯನ್ನು ಕೂಡ ಪಡೆಯಲಿದ್ದೇವೆ" ಎಂದರು.
ಏಪ್ರಿಲ್ 20 ರವರೆಗೆ ರಾಜ್ಯದ ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ ನಗರ, ಬೀದರ್ ನಗರ , ತುಮಕೂರು ನಗರ, ಉಡುಪಿ ನಗರ ಮತ್ತು ಮಣಿಪಾಲ್ ನಲ್ಲಿ ನೈಟ್ ಕರ್ಫ್ಯೂ ಮುಂದುವರೆಯಲಿದೆ.
ಸಚಿವ ಡಾ. ಸುಧಾಕರ್ ಮಾತನಾಡಿ, "ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳ ಮೇಲೆ ನಿಗಾ ಇರಿಸಲಾಗಿದ್ದು, ಹೊರಾಂಗಣ ಕಾರ್ಯಕ್ರಮಗಳಿಗೆ 200 ಜನರಿಗಿಂತ ಅಧಿಕ ಮದಿ ಸೇರುವಮ್ತಿಲ್ಲ, ಇನ್ನು ಒಳಾಂಗಣ ಕಾರ್ಯಕ್ರಮಗಳಲ್ಲಿ 100 ಜನ ಮೀರುವಂತಿಲ್ಲ, ಜೊತೆಗೆ ಅನಗತ್ಯ ಗುಂಪು ಸೇರೋದಕ್ಕೆ ಅವಕಾಶವಿಲ್ಲ" ಎಂದರು.
ಇನ್ನು ಕೊರೊನಾ ಟೆಸ್ಟ್ ಗೆ ಹೆಲ್ಪ್ ಲೈನ್ ಗಳ ಸಂಖ್ಯೆ ಹೆಚ್ಚಳವಾಗಲಿದ್ದು, ಈಗಿರುವ ಆದೇಶದಂತೆ ನೈಟ್ ಕರ್ಫ್ಯೂ ಏಪ್ರಿಲ್ 20 ರವರೆಗೆ ಮುಂದುವರಿಯಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಒಂದೇ ದಿನ 2,17,53 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿನ ಸಂಖ್ಯೆ 14,291,917ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,74,308 ಕ್ಕೆ ಏರಿಕೆಯಾಗಿದೆ.