ನವದೆಹಲಿ, ಎ.16 (DaijiworldNews/PY): ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ ಕಾಯತಂತ್ರಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮನಬಂದಂತೆ ಲಾಕ್ಡೌನ್ ಜಾರಿ ಮಾಡುವುದು, ಗಂಟೆ ಬಾರಿಸುವುದು ಹಾಗೂ ಭಗವಂತನನ್ನು ಪ್ರಾರ್ಥಿಸುವುದು ಸರ್ಕಾರ ರೂಪಿಸಿದ ಕಾರ್ಯತಂತ್ರಗಳಾಗಿವೆ" ಎಂದು ಲೇವಡಿ ಮಾಡಿದ್ದಾರೆ.
ಕೊರೊನಾ ತಡೆಗಟ್ಟಲು ಹಾಗೂ ಲಸಿಕೆ ಅಭಿಯಾನದ ಬಗ್ಗೆ ಸರ್ಕಾರ ತೆಗೆದುಕೊಂಡ ತೀರ್ಮಾನಗಳಿಗೆ ಕಾಂಗ್ರೆಸ್ ಈ ಹಿಂದೆಯೂ ಟೀಕೆ ಮಾಡಿದ್ದು, "ಸರ್ಕಾರ ಸಮಗ್ರವಾಗಿ ಯೋಜನೆ ರೂಪಿಸದೇ ಮನಬಂದಂತೆ ತೀರ್ಮಾನ ತೆಗೆದುಕೊಳ್ಳುತ್ತಿದೆ. ಇದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ" ಎಂದಿತ್ತು.