ಬೆಂಗಳೂರು, ಏ 16 (DaijiworldNews/MS): ಕಾಂಗ್ರೆಸ್ ತಲೆಹಿಡುಕರ ಪಕ್ಷ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ಕಾಂಗ್ರೆಸ್ ಮುಗಿಬಿದ್ದಿದ್ದು, " ಕಾಮಿಡಿ ಕಿಂಗ್ ನಳಿನ್ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿಹೋಗಿದ್ದು ಕಟೀಲ್ರ ರಾಸಲೀಲೆ ಸಿಡಿಯ ಬಗ್ಗೆ ನಾವೇ ಹೇಳಬೇಕೆ ಅಥವಾ ನೀವು ಹೇಳುವಿರಾ ಎಂದು ನೇರವಾಗಿ ಪ್ರಶ್ನಿಸಿದೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು " ಬಿಜೆಪಿ ಪಕ್ಷ ತಲೆಹಿಡುಕರ ಅಡ್ಡೆಯಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆವು, ಆ ಸಾಧನೆಯಲ್ಲಿ ಕಟೀಲ್ ಆವರ ಕೊಡುಗೆ ದೊಡ್ಡದಿದೆ. ಕರಾವಳಿ ಭಾಗದ ಜನ ಇವರ ಲೀಲೆಗಳ ಬಣ್ಣನೆ, ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ನಳಿನ್ ಅವರೇ ಬಹಳ ಹಿಂದೆ ನಿಮ್ಮದೂ ಒಂದು ಸಿಡಿ ಸದ್ದು ಮಾಡಿತ್ತಲ್ಲ, ಏನದು ನೀವು ಹೇಳುವಿರಾ, ನಾವೇ ಹೇಳಬೇಕೆ?!' ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ "ಕಾಮಿಡಿ ಕಿಂಗ್ ನಳಿನ್ ಅವರ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿ ಹೋಗಿದೆ. ತಲೆಹಿಡುಕ ಯಾರೆಂದು ಕೇಳಿದರೆ ಮಂಗಳೂರು ಭಾಗದ ಜನತೆ ಬಗೆಬಗೆಯಾಗಿ ಕಟೀಲ್ರ ರಾಸಲೀಲೆ ವಿವರಿಸುತ್ತಾರೆ. ಕಟೀಲ್ರೇ ನೀವು ತಲೆಹಿಡಿದ ಪಟ್ಟಿ ದೊಡ್ಡದಿದೆ ಅಲ್ಲವೇ? ನಿಶಿತಾ ಪೂಜಾರಿಯಿಂದ ಹಿಡಿದು ಕರಾವಳಿಯ ಎಷ್ಟು ಹೆಣ್ಣುಮಕ್ಕಳನ್ನು ಕಾಡಿದ್ದೀರಿ ಹೇಳುವಿರಾ?" ಎಂದು ಲೇವಡಿ ಮಾಡಿದೆ.