ಚಿಕ್ಕಮಗಳೂರು, ಏ.27 (DaijiworldNews/HR): ಈಗಾಗಲೇ ಜನರು ಬಾಂಬೆಯಿಂದ ಬೆಂಗಳೂರಿಂದ ಉಡುಪಿ, ಚಿಕ್ಕಮಗಳೂರಿಗೆ ಬರುತ್ತಾ ಇದ್ದು, ಅವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು. ವರದಿ ಬರುವವರೆಗೂ ಕ್ವಾರಂಟೈನ್ ಮಾಡುವಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಚಿಕ್ಕಮಗಳೂರಿನ ಹಳ್ಳಿ ಕಡೆ ಕ್ವಾರಂಟೈನ್ ಮಾಡಲು ತೋಟದ ಮನೆಯ ವ್ಯವಸ್ಥೆ ಇದೆ. ಆದರೆ ನಗರ ಭಾಗದಲ್ಲಿ ವೈರಸ್ ಹರಡುವ ಭಯ ಇದೆ" ಎಂದರು.
ಇನ್ನು "ಪ್ರತಿದಿನ ಸಂಬಂಧ ಪಟ್ಟ ಡಿಸಿ, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೊರೊನಾ ಪಾಸಿಟಿವ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಾರದು ಎಂಬುದು ಎಲ್ಲರ ಅಪೇಕ್ಷೆ" ಎಂದಿದ್ದಾರೆ.
ಖಾಸಗಿ ಆಸ್ಪತ್ರೆ ಯಲ್ಲಿ ಕೊರೊನಾ ಟೆಸ್ಟ್ ಬಗ್ಗೆ ನಿಗದಿ ಪಡಿಸಿದ ದರ ಪಟ್ಟಿಯನ್ನು ಜನರಿಗೆ ಕಾಣುವಂತೆ ಆಸ್ಪತ್ರೆಯಲ್ಲಿ ಡಿಸ್ಪ್ಲೇ ಮಾಡಬೇಕು ಎಂದು ಸಭೆಯಲ್ಲಿ ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.