ಬೆಂಗಳೂರು, ಎ.28 (DaijiworldNews/PY): ಕೊರೊನಾ ಲಸಿಕೆ ಅಭಿಯಾನದಲ್ಲಿ ಅಂಗವಿಕಲರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

"ಅಂಗವಿಕಲರು ಎಸ್ಎಂಎಸ್, ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳುಹಿಸುವ ಮನವಿಗಳನ್ನು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಸ್ವೀಕರಿಸಬೇಕು" ಎಂದು ನ್ಯಾ.ಎ.ಎಸ್.ಓಕಾ ನೇತೃತ್ವದ ಪೀಠ ತಿಳಿಸಿದೆ.
"ಅಂಗವಿಕಲರು ಕೊರೊನಾ ಲಸಿಕೆಗಾಗಿ ಲಸಿಕಾ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ಕಾಯದಂತೆ ನೋಡಿಕೊಳ್ಳಬೇಕು" ಎಂದು ಹೈಕೋರ್ಟ್ ತಿಳಿಸಿದೆ.
ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಅಂಗವಿಕಲ ರಕ್ಷಣಾ ಸಮಿತಿ ಪರ ಹಾಜರಿದ್ದ ವಕೀಲ ವಿಶ್ವಶೇಖರ್, "ಕಾಯ್ದೆಯ ಪ್ರಕಾರ ಲಸಿಕೆ ನೀಡುವ ಸಂದರ್ಭ ಅಂಗವಿಕಲರಿಗೆ ಆದ್ಯತೆ ನೀಡಬೇಕು" ಎಂದು ವಾದಿಸಿದ್ದಾರೆ.
ಈ ವಿಚಾರಣೆಯನ್ನು ನ್ಯಾಯಾಲಯ ಮೇ. 12ಕ್ಕೆ ಮುಂದೂಡಿತು.