ಬೆಂಗಳೂರು, ಮೇ.01 (DaijiworldNews/PY): "ಒಂದು ಕಡೆ ಲಸಿಕೆ ದಾಸ್ತಾನು ಇಲ್ಲ ಎಂದು ಸಚಿವ ಸುಧಾಕರ್ ಹೇಳುತ್ತಾರೆ. ಮತ್ತೊಂದು ಕಡೆ ಲಸಿಕೆ ಬೇಕಾದಷ್ಟಿದೆ ಎಂದು ಸಿಎಂ ಹೇಳುತ್ತಾರೆ. ಹೀಗೆ ತಲೆಗೊಂದು ಹೇಳಿಕೆ, ತಲೆಗೊಂದು ಅಭಿಪ್ರಾಯ ಕೊಡುತ್ತಾ ಈ ಸರ್ಕಾರ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಒಂದು ಕಡೆ ಲಸಿಕೆ ದಾಸ್ತಾನು ಇಲ್ಲ ಎಂದು ಸಚಿವ ಸುಧಾಕರ್ ಹೇಳುತ್ತಾರೆ..ಮತ್ತೊಂದು ಕಡೆ ಲಸಿಕೆ ಬೇಕಾದಷ್ಟಿದೆ ಎಂದು ಸಿಎಂ ಹೇಳುತ್ತಾರೆ. ಹೀಗೆ ತಲೆಗೊಂದು ಹೇಳಿಕೆ, ತಲೆಗೊಂದು ಅಭಿಪ್ರಾಯ ಕೊಡುತ್ತಾ ಈ ಸರ್ಕಾರ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ.ಹಾಗಾದರೆ ಇಲ್ಲಿ ಸುಳ್ಳು ಹೇಳುತ್ತಿರುವುದು ಯಾರು..? ಮುಖ್ಯಮಂತ್ರಿಗಳೋ.? ಆರೋಗ್ಯ ಸಚಿವರೋ?" ಎಂದು ಪ್ರಶ್ನಿಸಿದ್ದಾರೆ.
"18 ವರ್ಷ ಮೇಲ್ಪಟ್ಟ ಎಲ್ಳರಿಗೂ ಇಂದಿನಿಂದ ಮೂರನೆ ಹಂತದ ಕೋವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ವಿಪರ್ಯಾಸವೆಂದರೆ ಲಸಿಕಾ ಅಭಿಯಾನಕ್ಕೆ ರಾಜ್ಯಗಳಿಗೆ ಲಸಿಕೆಯೇ ಪೂರೈಕೆಯಾಗಿಲ್ಲ. ಲಸಿಕೆ ಪೂರೈಸದೆ ಅಭಿಯಾನದ ಘೋಷಣೆ ಮಾಡಿದ್ಯಾಕೆ? ಅಭಿಯಾನವೂ ಕೇಂದ್ರಕ್ಕೆ ಬಿಟ್ಟಿ ಪ್ರಚಾರದ ಸರಕಾಯಿತೇ?" ಎಂದು ಕೇಳಿದೆ.
ರಾಜ್ಯದಲ್ಲಿ ಲಸಿಕೆ ನೀಡಿಕೆ ವಿಚಾರದ ಬಗ್ಗೆ ಸರ್ಕಾರದಲ್ಲೇ ಗೊಂದಲ ಆರಂಭವಾಗಿದ್ದು, ಮೇ.1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರೆ, ಆರೋಗ್ಯ ಸಚಿವ ಸುಧಾಕರ್ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಿಲ್ಲ, ಕೇಂದ್ರ ಸರ್ಕಾರ ನೀಡುತ್ತಿರುವ ಲಸಿಕೆ 45 ವರ್ಷ ಮೇಲ್ಪಟ್ಟವರಿಗೆ ಹೊರತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆಯನ್ನು ಬಳಸುವಂತಿಲ್ಲ ಎಂದಿದ್ದಾರೆ. ಈ ಹಿನ್ನೆಲೆ ಸಿಎಂ ಹಾಗೂ ಸಚಿವರ ಮಧ್ಯೆ ಗೊಂದಲ ಪ್ರಾರಂಭವಾಗಿದೆ.