ನವದೆಹಲಿ, ಮೇ.03 (DaijiworldNews/PY): ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದು, "ಜನರ ತೀರ್ಪನ್ನು ವಿನಮ್ರವಾಗಿ ನಾವು ಸ್ವೀಕರಿಸುತ್ತೇವೆ" ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜನರ ಆದೇಶವನ್ನು ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ನಮ್ಮನ್ನು ಬೆಂಬಲಿಸಿದ ಲಕ್ಷಾಂತರ ಮತದಾರರಿಗೆ ಕೃತಜ್ಞತೆಗಳು. ನಮ್ಮ ಮೌಲ್ಯ ಹಾಗೂ ಆದರ್ಶಗಳಿಗೆ ನಾವು ನಿರಂತರವಾಗಿ ಹೋರಾಡುತ್ತೇವೆ" ಎಂದು ತಿಳಿಸಿದ್ದಾರೆ.
"ಅದ್ಭುತ ವಿಜಯಕ್ಕಾಗಿ ಎಂ.ಕೆ ಸ್ಟಾಲಿನ್ ಅವರಿಗೆ ಅಭಿನಂದನೆಗಳು. ತಮಿಳುನಾಡಿನ ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಆತ್ಮವಿಶ್ವಾಸದ ಹೆಜ್ಜೆ ಇದೆ ಎಂದು ಸಾಬೀತುಪಡಿಸುತ್ತೇವೆ. ಶುಭಾಶಯಗಳು" ಎಂದು ಹೇಳಿದ್ದಾರೆ.
"ಪಶ್ಚಿಮ ಬಂಗಾಳ ವಿಧಾನಸಭೆ ಚುನವಣೆಯಲ್ಲು ಬಿಜೆಪಿಯನ್ನು ಸೋಲಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಹಾಗೂ ಬಂಗಾಳದ ಜನರನ್ನು ಅಭಿನಂದಿಸಲು ನನಗೆ ಸಂತೋಷವಾಗಿದೆ" ಎಂದಿದ್ದಾರೆ.