ಜೈಪುರ, ಮೇ. 03 (DaijiworldNews/HR): ಕೊರೊನಾ ಸೋಂಕು ತಮ್ಮ ಮೊಮ್ಮಗನಿಗೆ ಹರಡಬಹುದೆಂಬ ಭಯದಲ್ಲಿ ಕೊರೊನಾ ಪೀಡಿತ ವಯೋವೃದ್ಧ ದಂಪತಿ ಚಲಿಸುವ ರೈಲಿನ ಮುಂದೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಆತ್ಮಹತ್ಯೆಗೆ ಶರಣಾದವರನ್ನು ಹೀರಲಾಲ್ ಬೈರ್ವಾ (75) ಹಾಗೂ ಅವರ ಪತ್ನಿ ಶಾಂತಿಬಾಯಿ (70) ಎಂದು ಗುರುತಿಸಲಾಗಿದೆ.
ತಮ್ಮ 18 ವರ್ಷದ ಮೊಮ್ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದು, ವಯಸ್ಸಾದ ದಂಪತಿಗಳ ಮಗ ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಹಿರಿಯ ದಂಪತಿಗಳಿಗೆ ಎಪ್ರಿಲ್ 29 ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅಂದಿನಿಂದ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು ಎಂದು ರೈಲ್ವೆ ಕಾಲೋನಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್ ಚಂದ್ ಶರ್ಮಾ ತಿಳಿಸಿದ್ದಾರೆ.
ರವಿವಾರ ಬೆಳಿಗ್ಗೆ ಚಂಬಲ್ ಓವರ್ಬ್ರಿಡ್ಜ್ ಬಳಿ ದಂಪತಿಗಳು ರೈಲಿನ ಮುಂದೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.