ಚೆನ್ನೈ, ಮೇ.09 (DaijiworldNews/PY): ಕೊರೊನಾ ವಿರುದ್ದದ ಹೋರಾಟದಲ್ಲಿ ಸಹಾಯವಾಗುವ ಸಲುವಾಗಿ, ತಮಿಳುನಾಡು ಸರ್ಕಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 450 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಅನ್ನು ನೀಡಿದೆ.

ಸಿಎಸ್ಕೆ ತಂಡದ ನಿರ್ದೇಶಕ ಆರ್.ಶ್ರೀನಿವಾಸ್ ಅವರು 450 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಅನ್ನು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದ್ದು, ಈ ವೇಳೆ ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೆ ರೂಪಾ ಗುರುನಾಥ್ ಉಪಸ್ಥಿತರಿದ್ದರು.
ಕೊರೊನಾ ರಿಲೀಫ್ ಕಾರ್ಯಗಳನ್ನು ಮಾಡುತ್ತಿರುವ ಭೂಮಿಕಾ ಟ್ರಸ್ಟ್ನೊಂದಿಗೆ ಕೈ ಜೋಡಿಸಿರುವ ಸಿಎಸ್ಕೆ ಈ ಕಾರ್ಯವನ್ನು ಕೈಗೊಂಡಿದೆ. ಸಿಎಸ್ಕೆ ಮೊದಲ ಹಂತದ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಅನ್ನು ನೀಡಿದ್ದು, ಇನ್ನೊಂದು ವಾರದಲ್ಲಿ ಉಳಿದ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಅನ್ನು ಅನ್ನು ಸರ್ಕಾರಕ್ಕೆ ಹಸ್ತಾಂತರಿಸಲಿದೆ.