ಬೆಂಗಳೂರು, ಮೇ.25 (DaijiworldNews/HR): "ಕರ್ನಾಟಕದ 40 ಲ್ಯಾಬ್ಗಳಲ್ಲಿ ಕೊರೊನಾ ಮಾದರಿಗಳ ಪರೀಕ್ಷೆ ವಿಳಂಬ ಮಾಡಿದಕ್ಕಾಗಿ ಒಟ್ಟು 20.20 ಲಕ್ಷ ದಂಡವನ್ನು ವಿಧಿಸಲಾಗಿದೆ" ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ ನಾರಾಯಣ ಮಾಹಿತಿ ನೀಡಿದ್ದಾರೆ.

ಸಾಂಧರ್ಭಿಕ ಚಿತ್ರ
ರಾಜ್ಯದ 31 ಖಾಸಗಿ ಲ್ಯಾಬ್, 9 ಸರ್ಕಾರಿ ಲ್ಯಾಬ್ಗಳು ಸೇರಿ 40 ಪ್ರಯೋಗಾಲಯಗಳಿಗೆ ದಂಡ ಹಾಕಲಾಗಿದೆ ಎಂದು ಅಶ್ವಥ ನಾರಾಯಣ ಅವರಿಗೆ ನೋಡೆಲ್ ಅಧಿಕಾರಿಶಾಲಿನಿ ರಜನೀಶ್ ಅವರು ವಿವರಗಳನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅಶ್ವಥ ನಾರಾಯಣ, "24 ಗಂಟೆಯಲ್ಲಿ ಎಲ್ಲಾ ಪ್ರಯೋಗಾಲಯಗಳಿಗೆ ಕೊರೊನಾ ಮಾದರಿ ಪರೀಕ್ಷೆ ವರದಿ ನೀಡಬೇಕು ಎಂದು ಸೂಚಿಸಲಾಗಿದ್ದರು, ಕೆಲವು ಲ್ಯಾಬ್ಗಳು ವರದಿ ನೀಡುವುದು ತಡ ಮಾಡುತ್ತಿವೆ" ಎಂದರು.
ಈ ರೀತಿಯಾಗಿ ಕೊರೊನಾ ಮಾದರಿಗಳ ಪರೀಕ್ಷೆ ವಿಳಂಬ ಮಾಡುತ್ತಿರುವ ಲ್ಯಾಬ್ಗಳ ವಿರುದ್ಧ ಮೇ 8ರಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದುವರೆಗೂ 10,103 ಮಾದರಿಗಳ ವರದಿ ತಡವಾಗಿದೆ. ಇದರಲ್ಲಿ 3,034 ಸರ್ಕಾರಿ ಮತ್ತು ಉಳಿದಿದ್ದು ಖಾಸಗಿ ಲ್ಯಾಬ್ಗಳಿಗೆ ಸೇರಿದ್ದು, ವಿಳಂಬವಾದ ಪ್ರತಿ ಮಾದರಿಗೆ 200 ರೂ. ದಂಡ ವಿಧಿಸಲಾಗಿದೆ" ಎಂದು ತಿಳಿಸಿದರು.
ಇನ್ನು "5 ಲ್ಯಾಬ್ಗಳು ಐಸಿಎಂಆರ್ ಪೋರ್ಟಲ್ಗೆ ವರದಿ ಅಪ್ಲೋಡ್ ಮಾಡದೇ ರೋಗಿಗಳಿಗೆ ನೀಡಿದ್ದು, ಇಂತಹ ಲ್ಯಾಬ್ಗಳಿಗೆ ದಂಡ ವಿಧಿಸಲಾಗಿದೆ" ಎಂದು ಹೇಳಿದರು.