ಬೆಂಗಳೂರು, ಜೂ 3 (DaijiworldNews/MS): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ 5ಗಂಟೆಗೆ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದು, ಲಾಕ್ ಡೌನ್ ವಿಸ್ತರಣೆ ಹಾಗೂ ಎರಡನೇ ಹಂತದ ಪ್ಯಾಕೆಜ್ ಕುರಿತಂತೆ ಮಹತ್ವದ ಮಾಹಿತಿ ನೀಡುವ ಸಾಧ್ಯತೆಯಿದೆ.

ಈ ಹಿಂದೆ 1250 ಕೋಟಿ ರೂ. ಗಾತ್ರದ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಇಂದು ಮತ್ತೆ ಹಲವು ವಲಯಗಳಿಗೆ ಎರಡನೇ ಹಂತದ ಪ್ಯಾಕೆಜ್ ಘೋಷನೆ ಮಾಡುವ ಸಂಭವವಿದೆ. ಇದಲ್ಲದೆ ಜೂ. 7 ರ ಬಳಿಕ ಜೂ. 14 ರವರೆ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ಮತ್ತೊಂದು ಹಂತದಲ್ಲಿ ಅಂದರೆ ಜೂನ್ 21 ರವರೆಗೆ ಮತ್ತೊಂದು ಲಾಕ್ ಡೌನ್ ವಿಸ್ತರಣೆ ಮುಂದುವರಿಯಲಿದೆ ಎಂದ್ ವರದಿ ತಿಳಿಸಿದೆ.
ಕೊರೊನಾ ನಿಯಂತ್ರಣದ ಕುರಿತು ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಲಾಕ್ಡೌನ್ ವಿಸ್ತರಣೆ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ, ಮುಖ್ಯಮಂತ್ರಿ ಲಾಕ್ಡೌನ್ ಮುಂದುವರಿಸುವ ಕಡೆ ಒಲವು ತೋರಿದ್ದು ವಿಸ್ತರಿತ ಲಾಕ್ ಡೌನ್ ವೇಳೆ ಯಾವುದೇ ಸಡಿಲಿಕೆ ಇರುವುದಿಲ್ಲ ಎನ್ನಲಾಗಿದೆ.