ಬೆಂಗಳೂರು, ಜೂ 07 (DaijiworldNews/MS): ಸಾಂಕ್ರಮಿಕ ರೋಗದ ಕಾರಣದಿಂದ ಶಾಲೆಗಳು ಮುಚ್ಚಿವೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರಿಗೆ ಚಿಂತೆಯಾಗುವುದು ಸಾಮಾನ್ಯ . ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಒಂದು ಪಾಲಕರನ್ನೇ ಬೆಚ್ಚಿ ಬೀಳಿಸುವಂತಿದೆ.
ಈ ವಿಡಿಯೋದಲ್ಲಿ ಮಕ್ಕಳು ಮದ್ಯ ಸೇವಿಸುವ ದೃಶ್ಯಗಳಿವೆ. ಮಕ್ಕಳಿಗೆ ಮದ್ಯ ಸೇವಿಸುವಂತೆ ಪ್ರೇರೇಪಿಸಿ ಬಳಿಕ ಮತ್ತಿನಲ್ಲಿ ಅವರು ವರ್ತಿಸುವ ರೀತಿಯನ್ನು ಕಿಡಿಗೇಡಿಗಳು ಚಿತ್ರೀಕರಿಸಿರಬಹುದು ಎನ್ನಲಾಗಿದೆ.
ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುವಂತೆ ಉತ್ತೇಜಿಸುತ್ತಿವ ವಿಡಿಯೋ ಸೇರಿ ಮೂರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದ್ಯಪಾನ ಮಾಡಿದ ಮಕ್ಕಳು ಬೈದಾಡಿಕೊಳ್ಳುತ್ತಾರೆ.ಅಲ್ಲದೆ ಎಲ್ಲರನ್ನು ಅವಾಚ್ಯವಾಗಿ ನಿಂದಿಸುವ ಬಾಲಕನೊಬ್ಬ ಮತ್ತಷ್ಟು ಮದ್ಯಕ್ಕೆ ಬೇಡಿಕೆ ಇಡುತ್ತಾನೆ . ಘಟನೆ ನಡೆದ ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ , ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮರೆದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.