ನವದೆಹಲಿ, ಜೂ 16 (DaijiworldNews/MS): ಮೈಕ್ರೋಬ್ಲಾಗಿಂಗ್ ವೇದಿಕೆಯಾದ ಟ್ವಿಟರ್ ಹೊಸ ಐಟಿ ನಿಯಮಗಳನ್ನು ಅನುಸರಿಸಿದ ಕಾರಣ ಭಾರತದಲ್ಲಿ ಟ್ವಿಟರ್ ಮಧ್ಯವರ್ತಿ ಸ್ಥಾನ ಹಾಗೂ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಶಾಸನಬದ್ಧ ಅಧಿಕಾರಿಗಳನ್ನು ನೇಮಿಸುವ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನು ಅನುಸರಿಸಲು ವಿಫಲವಾದ ನಂತರ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಜೂನ್ 9ರಂದು ಟ್ವೀಟರ್ ಐಟಿ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಒಪ್ಪಂದದ ಆಧಾರದ ಮೇಲೆ ನೋಡಲ್ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಮುಖ್ಯ ಅನುಸರಣೆ ಅಧಿಕಾರಿಯ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಟ್ವೀಟರ್ ತಿಳಿಸಿತ್ತು. ಆದರೆ ಸಚಿವಾಲಯದ ಪತ್ರಗಳ ಹೊರತಾಗಿಯೂ ಟ್ವಿಟರ್ ನಿಯಮಗಳನ್ನು ಅನುಸರಿಸಿಲ್ಲ ಎಂದು ಮೂಲಗಳು ತಿಳಿಸಿವೆ
ಹೊಸ ಐಟಿ ನಿಯಮದ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವೀಟರ್ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಕೇಂದ್ರ ಈ ನಡುವೆ ಎಚ್ಚರಿಕೆ ನೀಡಿತ್ತು.
ಫೆಬ್ರವರಿಯಲ್ಲಿ ಸರ್ಕಾರ ಮೊದಲು ಘೋಷಿಸಿದ ಹೊಸ ಐಟಿ ನಿಯಮಗಳಿಗೆ, ವಾಟ್ಸಪ್, ಫೇಸ್ ಬುಕ್, ಗೂಗಲ್ ಮತ್ತು ಇತರರು ಸೇರಿದಂತೆ ಭಾರತದ ಟೆಕ್ ಕಂಪನಿಗಳು ದೇಶದ ಮುಖ್ಯ , ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿತ್ತು. ವಾಟ್ಸಪ್ ಮತ್ತು ಫೇಸ್ ಬುಕ್ ಅಧಿಕಾರಿಗಳನ್ನು ನೇಮಿಸಿದ್ರೆ ಟ್ವಿಟರ್ ಇಂಡಿಯಾ ಹೆಚ್ಚಿನ ಸಮಯವಕಾಶ ಕೇಳಿತ್ತು. ಅದರಂತೆ ಸರ್ಕಾರವು ಹೆಚ್ಚಿನ ಸಮಯವನ್ನು ಒದಗಿಸಿದರೂ ನಿಯಮಗಳನ್ನು ಅನುಸರಿಸಲು ಟ್ವಿಟರ್ ವಿಫಲವಾದ ನಂತರ, ಸಾಮಾಜಿಕ ಮಾಧ್ಯಮ ಮಧ್ಯವರ್ತಿಯಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿತು.
ಆದಾಗ್ಯೂ, ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸಲಾಗಿದೆ ಮತ್ತು ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಿಸಿದೆ ಎಂದು ಟ್ವಿಟರ್ ಮಂಗಳವಾರ ಹೇಳಿದೆ.