ನವದೆಹಲಿ, ಜೂ. 20 (DaijiworldNews/SM): ದೇಶದೆಲ್ಲೆಡೆ ಕೋವಿಡ್ ಲಸಿಕೆ ವಿತರಣೆಯ ಭರಾಟೆ ಹೆಚ್ಚಾಗಿದೆ. ಈ ನಡುವೆ ಗರ್ಭಿಣಿಯರಿಗೂ ಕೂಡ ಲಸಿಕೆ ವಿತರಣೆಗೆ ಕೇಂದ್ರ ಸಿದ್ಧತೆ ನಡೆಸಿದೆ.

ತಜ್ಞರ ತಂಡ ಶಿಫಾರಸಿನ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿಯರಿಗೆ ಲಸಿಕೆ ವಿತರಣೆ ಮಾಡಲಿದೆ. ಸದ್ಯ ಹಾಲುಣಿಸುವ ಮಾತೆಯರಿಗೆ ಲಸಿಕೆ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗರ್ಭಿಣಿಯರಿಗೆ ಲಸಿಕೆ ಸುರಕ್ಷತೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಲಸಿಕೆ ವಿತರಣೆಗೆ ಸಾಧ್ಯವಾಗಿಲ್ಲ.
ರೋಗನಿರೋಧಕ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸು ಅನುಸರಿಸಿ ಗರ್ಭಿಣಿಯರಿಗೆ ಕೋವಿಡ್ ವ್ಯಾಕ್ಸಿನೇಷನ್ ಅನುಮತಿಸುವ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.