ದಾವಣಗೆರೆ, ಜು.02 (DaijiworldNews/HR): ರಾಜ್ಯದ ಬಿಜೆಪಿ ಸರ್ಕಾರದಲ್ಲಿ 20 -25 ಪರ್ಸೆಂಟ್ ಲಂಚ ಇಲ್ಲದೇ ಯಾವ ಕೆಲಸವೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರದಲ್ಲಿ ಲಂಚ ನಡೆಯುತ್ತಿರುವುದು ನಿಜ ಸಂಗತಿಯಾಗಿದ್ದು, ಯಡಿಯೂರಪ್ಪನವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂತರ ಲಂಚ ತೆಗೆದು ಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ" ಎಂದು ಆರೋಪಿಸಿದ್ದಾರೆ.
ಇನ್ನು ಸಮಾಜ ಕಲ್ಯಾಣ ಸಚಿವರ ಆಪ್ತ ಸಹಾಯಕ ಅರೆಸ್ಟ್ ಆಗಿದ್ದು, ಇದೀಗ ಬಿಡುಗಡೆಯಾಗಿದೆ. ಯಡಿಯೂರಪ್ಪನವರ ಮಗನೇ ದೂರು ನೀಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.