ನವದೆಹಲಿ, ಜು. 02 (DaijiworldNews/SM): ಗರ್ಭಿಣಿಯರು ಕೋವಿಡ್ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ.

ಎನ್.ಟಿ.ಎ.ಜಿ.ಐ. ಸಲ್ಲಿಸಿದ ಪ್ರಸ್ತಾಪವನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ವೀಕರಿಸಿದೆ. ಹಾಗೂ ಗರ್ಭಿಣಿಯರು ಕೋವಿನ್ ಆಪ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದೆ. ಅಲ್ಲದೆ, ಸಮೀಪದ ವ್ಯಾಕ್ಸಿನ್ ಸೆಂಟರ್ ಗೆ ತೆರಳಿ ಲಸಿಕೆ ಪಡೆಯಬಹುದು ಎಂದು ತಿಳಿಸಿದೆ.