ಭೋಪಾಲ್, ಜು 03 (DaijiworldNews/PY): ಮಹಿಳೆಯೊಬ್ಬರ ಮೇಲೆ ಆಕೆಯ ತಂದೆ ಹಾಗೂ ಸಹೋದರರು ಹಲ್ಲೆ ನಡೆಸಿ, ಮರಕ್ಕೆ ನೇತು ಹಾಕಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ನಡೆದಿದೆ.

ಗಂಡನ ಮನೆಯಿಂದ ಮಹಿಳೆ ಓಡಿ ಹೋಗಲು ಯತ್ನಿಸಿದ್ದ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ಮಹಿಳೆ ಸಮೀಪದ ಹಳ್ಳಿಯ ವ್ಯಕ್ತಿಯನ್ನು ವಿವಾಹವಾಗಿದ್ದು, ಆಕೆಯ ಪತಿ ಗುಜರಾತಿಗೆ ಕೆಲಸಕ್ಕಾಗಿ ಹೋಗುತ್ತಿದ್ದ. ಗಂಡನ ಬಗ್ಗೆ ಅತೃಪ್ತಿ ಹೊಂದಿದ್ದ ಮಹಿಳೆ ಗಂಡನ ಮನೆ ಬಿಟ್ಟು ಅಲಿರಾಜ್ಪುರದ ತನ್ನ ಮಾವನ ಮನೆಗೆ ಹೋಗಿದ್ದಳು.
"ಗಂಡನ ಮನೆ ತೊರೆದ ಮಹಿಳೆಯ ಬಗ್ಗೆ ತಂದೆ ಹಾಗೀ ಸಹೋದರರು ಕೋಪಗೊಂಡಿದ್ದು, ಆಕೆಗೆ ಥಳಿಸಿದ್ದಾರೆ. ಸ್ಥಳೀಯ ವ್ಯಕ್ತಿರ್ಯೋರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿತ್ತು. ನಂತರ ಈ ಘಟನೆ ಪೊಲೀಸರ ಗಮನಕ್ಕೆ ಬಂಧಿದೆ. ಈ ಬಗ್ಗೆ ಜುಲೈ ರಂದೇ ಎಫ್ಐಆರ್ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ" ಎಂದು ಅಲಿರಾಜ್ಪುರ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಗವವಿ ತಿಳಿಸಿದ್ದಾರೆ.
"ಘಟನೆಯ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜೂನ್ 28ರಂದು ಬೇಡೆ ಪೂಲ್ ತಲಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ" ಎಂದು ವಿಜಯ್ ಭಾಗವವಿ ಹೇಳಿದ್ದಾರೆ.