ಸೋಪಿಯಾನ್, ಜು 03 (DaijiworldNews/PY): ಐಇಡಿ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಸೋಪಿಯಾನ್ನ ನದೀಮ್ ಅಯ್ಯೂಬ್ ಮತ್ತು ಬನಿಹಾಲ್ನ ತಾಲಿಬುರ್ರಹ್ಮಾನ್ ಎಂದು ಗುರುತಿಸಲಾಗಿದೆ.
ಬನಿಹಾಲ್ ನಿವಾಸಿಯಾದ ನದೀಮುಲ್ ಹಕ್ ಎಂಬಾತನನ್ನು 5.5 ಕೆ.ಜಿ ಐಇಡಿ ಸಹಿತ ಜೂನ್ 27ರಂದು ಜಮ್ಮು ನಗರದ ಹೊರವಲಯ ಬತಿಂದಿಯಲ್ಲಿ ಬಂಧಿಸಲಾಗಿತ್ತು. ಈ ಸಂದರ್ಬ ಬಂಧಿತ ಇನ್ನಿಬ್ಬರ ಹೆಸರನ್ನು ಬಾಯ್ಬಿಟ್ಟಿದ್ದ. ಈ ಹಿನ್ನೆಲೆ ಮತ್ತೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ವಿಚಾರಣೆಯ ಸಂದರ್ಭ, ವ್ಯಕ್ತಿಯೋರ್ವರ ನಿರ್ದೇಶನದ ಮೇರೆಗೆ ತಾವು ಈ ದುಷ್ಕೃತ್ಯ ಸಂಚು ರೂಪಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಜಮ್ಮುವಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಐಇಡಿ ಸ್ಪೋಟಿಸಲು ತಮಗೆ ನಿರ್ದೇಶನ ನೀಡುತ್ತಿದ್ದ ವ್ಯಕ್ತಿ ಸೂಚಿಸಿದ್ಧಾಗಿ ಆರೋಪಿಗಳು ಪೊಲೀಸರ ಮುಂದೆ ತಿಳಿಸಿದ್ದಾರೆ.