ನವದೆಹಲಿ, ಜು 03 (DaijiworldNews/PY): "ಕೊರೊನಾದ ಮೂರನೇ ಅಲೆ ತಪ್ಪಿಸಲು ದೇಶದ ನಿಜವಾದ ಕೊರೊನಾ ಲಸಿಕೆ ಗುರಿ ದರಕ್ಕಿಂತ ಪ್ರಸ್ತುತ ಶೇ. 27ರಷ್ಟು ಕಡಿಮೆ ಇದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಂತರವನ್ನು ಮನದಟ್ಟು ಮಾಡಿಕೊಳ್ಳಿ" ಎಂದಿದ್ದಾರೆ.
ಟ್ವೀಟ್ನಲ್ಲಿ ಗ್ರಾಫ್ವೊಂದನ್ನು ಹಂಚಿಕೊಂಡಿದ್ದು, ನಿಜವಾದ ಲಸಿಕೆ ದರ ಹಾಗೂ ಸರ್ಕಾರ ಉದ್ದೇಶಿಸಿದ ಲಸಿಕ ದರದ ಮಧ್ಯೆ ಶೇ.27ರಷ್ಟು ಕಡಿಮೆ ದರ ಇದೆ ಎಂದು ಉಲ್ಲೇಖ ಮಾಡಲಾಗಿದೆ.
ಕೊರೊನಾ ಲಸಿಕೆ ಆಭಿಯಾನ ಆರಂಭವಾದ ಸಮಯದಿಂದಲೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನೀತಿಯ ವಿರುದ್ದ ಕಿಡಿಕಾರುತ್ತಿದ್ದಾರೆ. ದೇಶದಲ್ಲಿ ಲಸಿಕೆ ಸಮಸ್ಯೆ ನಿವಾರಿಸಬೇಕು ಎನ್ನು ಉದ್ದೇಶದಿಂದ ಹಲವು ಅಂಶಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದರು.
ಕೇಂದ್ರ ಸಚಿವರು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದು, ಕೊರೊನಾ ಲಸಿಕೆಗಳ ವಿಚಾರದ ಮಾಹಿತಿ ನೀಡಿದ್ದರೂ ಕೂಡಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, "ಜುಲೈ ತಿಂಗಳು ಬಂದಿದೆ. ಆದರೆ, ಲಸಿಕೆ ಇನ್ನೂ ಬಂದಿಲ್ಲ" ಎಂದಿದ್ದರು.
ರಾಹುಲ್ ಗಾಂಧಿ ಮಾಡಿರುವ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಹರ್ಷವರ್ಧನ್, "ಜುಲೈ ತಿಂಗಳ ಲಸಿಕೆ ಲಭ್ಯತೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಗುರುವಾರ ಬಹಿರಂಗಪಡಿಸಿದ್ದು, ರಾಹುಲ್ ಗಾಂಧಿ ಅವರ ಸಮಸ್ಯೆ ಏನಂತೆ? ಅವರಿಗೆ ಓದಲು ಬರುವುದಿಲ್ಲವೇ? ಅವರಿಗೆ ಅರ್ಥವಾಗುವುದಿಲ್ಲವೇ? ಅಹಂಕಾರ ಮತ್ತು ನಿರ್ಲಕ್ಷ್ಯವೆಂಬ ವೈರಸ್ಗೆ ಲಸಿಕೆ ಇಲ್ಲ" ಎಂದು ಹೇಳಿದ್ದರು.