ಪಣಜಿ, ಜು.03 (DaijiworldNews/HR): ಕೊರೊನಾದಿಂದ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ 2 ಲಕ್ಷ ರೂ ಆರ್ಥಿಕ ನೆರವು ನೀಡಲಾಗುವುದು ಎಂದು ಗೋವಾ ಸರ್ಕಾರ ಶನಿವಾರ ಘೋಷಣೆ ಮಾಡಿದೆ.

ಸಾಂಧರ್ಭಿಕ ಚಿತ್ರ
ವಾರ್ಷಿಕ ಆದಾಯ 8 ಲಕ್ಷ ರೂ ಮೀರದ ಮತ್ತು ಗೋವಾದಲ್ಲಿ ಕನಿಷ್ಠ 15 ವರ್ಷ ವಾಸಿಸುವ ದಾಖಲಾತಿ ಹೊಂದಿರುವ ಕುಟುಂಬಗಳಲ್ಲಿ ಯಾರಾದರೂ ಕೊರೊನಾದಿಂದಾಗಿ ಮೃತಪಟ್ಟವರೆ ಅಂತವರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಇನ್ನು ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯ ಲಾಭ ಪಡೆಯಲು ಕೊರೊನಾ ಮೃತರ ಕುಟುಂಬಗಳಿಗೆ ಒಬ್ಬರಿಗೆ ಮಾತ್ರ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಒಂದು ಕುಟುಂಬದಲ್ಲಿ ಕೊರೊನಾಗೆ ಎಷ್ಟೇ ಜನರು ಬಲಿಯಾಗಿದ್ದರು ಕೂಡ ಒಬ್ಬರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ವರದಿಯಾಗಿದೆ.