ಜಮ್ಮು, ಜು 04 (DaijiworldNews/PY): ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
"ಬಂಧಿತನನ್ನು ಪಾಕಿಸ್ತಾನದ ಚೋಪುರದ ಜಾವೈದ್ ಎಂದು ಗುರುತಿಸಲಾಗಿದೆ" ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾಪಡೆಯು, ಗಲ್ಪುರ ವ್ಯಾಪ್ತಿಯ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕಣ್ಣಿಟ್ಟಿದ್ದು, ಅನುಮಾಸ್ಪದವಾಗಿ ಓಡಾಡಿಕೊಂಡು ಒಳನುಗ್ಗಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ತಡೆದು ಬಂಧಿಸಿದೆ.
ಬಳಿಕ "ಆತನನ್ನು ವಿಚಾರಣೆಗೆ ಒಳಪಡಿಸಿದ್ದು, ಆತನನ್ನು ಪಾಕಿಸ್ತಾನದ ಚೋಪುರದ ಜಾವೈದ್ ಎಂದು ಗುರುತಿಸಲಾಗಿದೆ" ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.