ಬೆಂಗಳೂರು, ಜು 04 (DaijiworldNews/PY): "ರಫೇಲ್ ಹಗರಣ, ಕೇಂದ್ರ ಸರ್ಕಾರದ ಪ್ರಾಯೋಜಿತ ಭ್ರಷ್ಟಾಚಾರ.ಈ ಡೀಲ್ನಲ್ಲಿ ವ್ಯಾಪಕ ಭ್ರಷ್ಟಾಚಾರದ ಅನುಮಾನದಿಂದಲೇ ಫ್ರಾನ್ಸ್, ಈ ಹಗರಣದ ತನಿಖೆಗೆ ಆದೇಶಿಸಿದೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಫೇಲ್ ಹಗರಣ, "ಕೇಂದ್ರ ಸರ್ಕಾರದ ಪ್ರಾಯೋಜಿತ ಭ್ರಷ್ಟಾಚಾರ.ಈ ಡೀಲ್ನಲ್ಲಿ ವ್ಯಾಪಕ ಭ್ರಷ್ಟಾಚಾರದ ಅನುಮಾನದಿಂದಲೇ ಫ್ರಾನ್ಸ್, ಈ ಹಗರಣದ ತನಿಖೆಗೆ ಆದೇಶಿಸಿದೆ. ಫ್ರಾನ್ಸ್ನಂತೆ ಇಲ್ಲೂ ಈ ಹಗರಣದ ತನಿಖೆ ಆಗಲಿ. ಮೋದಿಯವರು ಹಗರಣದ ತನಿಖೆಯನ್ನು ಸಂಸದೀಯ ಜಂಟಿ ಸಮಿತಿಗೆ ವಹಿಸಲಿ. ಆಗ ಡೀಲ್ನಲ್ಲಿ ಪ್ರಾಮಾಣಿಕತೆಯ ಮುಖವಾಡ ಹಾಕಿಕೊಂಡಿರುವ ಅಸಲಿ ಮುಖ ಬಯಲಾಗಲಿದೆ" ಎಂದಿದ್ದಾರೆ.
"ರಫೇಲ್ ಡೀಲ್ನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಅನುಮಾನಕ್ಕೆ ಈಗ ಪುಷ್ಟಿ ಸಿಕ್ಕಿದೆ. ₹59,000 ಕೋಟಿ ವ್ಯವಹಾರದ ರಫೇಲ್ ಹಗರಣದಲ್ಲಿ ಸ್ವತಃ ಪ್ರಧಾನಿ ಕಾರ್ಯಾಲಯವೇ ಭಾಗಿಯಾಗಿರುವುದು ಸತ್ಯ. 'ನಾ ಕಾವೂಂಗಾ,ನಾ ಕಾನೇ ದೂಂಗಾ' ಎಂದು ಹೇಳಿಕೊಳ್ಳುವ ಮೋದಿಯವರು, ರಫೇಲ್ ಡೀಲ್ನಲ್ಲಿ ಯಾರು ಎಷ್ಟು ಸಾವಿರ ಕೋಟಿ ತಿಂದರು ಎಂದು ತಿಳಿಸಲಿ" ಎಂದು ಆಗ್ರಹಿಸಿದ್ದಾರೆ.
"₹59,000 ಕೋಟಿ ರಫೇಲ್ ಅವ್ಯವಹಾರದಲ್ಲಿ ಕೇಂದ್ರ ಸರ್ಕಾರವೇ ನೇರವಾಗಿ ಭಾಗಿಯಾಗಿದೆ. ರಫೇಲ್ ಹಗರಣದಲ್ಲಿ ಅಕ್ರಮ ನಡೆದಿಲ್ಲವಾದರೆ 126 ರಫೇಲ್ ವಿಮಾನಗಳ ಬದಲು ಕೇವಲ 36 ವಿಮಾನ ಖರೀದಿಗೆ ಪ್ರಧಾನಿ ಅನುಮೋದನೆ ಕೊಟ್ಟಿದ್ಯಾಕೆ? ಹೆಚ್ಎಎಲ್ ಜೊತೆ ನಡೆದಿದ್ದ ಖರೀದಿ ಒಪ್ಪಂದ ದಿಢೀರ್ ರದ್ದಾಗಿ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ಗೆ ನೀಡಿದ್ಯಾಕೆ?" ಎಂದು ಪ್ರಶ್ನಿಸಿದ್ದಾರೆ.