ಬೆಂಗಳೂರು, ಜು 04 (DaijiworldNews/PY): 'ಚೌಕಿದಾರ್ ಚೋರ್ ಹೈ' ಎನ್ನುವುದು ಎಂದೆಂದಿಗೂ ಸತ್ಯ!. 'ಹಮ್ ದೋ ಹಮಾರೆ ದೋ' ಸರ್ಕಾರ ಅದೆಷ್ಟೇ ಕಣ್ಕಟ್ಟು ನಡೆಸಿದರೂ ಸತ್ಯ ಎಂದಿಗೂ ಸತ್ಯವೇ ಆಗಿರುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಚೌಕಿದಾರ್ ಚೋರ್ ಹೈ' ಎನ್ನುವುದು ಎಂದೆಂದಿಗೂ ಸತ್ಯ! ದೇಶದ ರಕ್ಷಣೆಗೆ ಸಂಬಂಧಿಸಿದ ಒಪ್ಪಂದವನ್ನ ಸರ್ಕಾರಕ್ಕೂ ಮೊದಲೇ ರಿಲಯನ್ಸ್ ಕಂಪೆನಿ ಮಾಡಿಕೊಳ್ಳುತ್ತದೆ ಎಂದರೆ ಏನರ್ಥ? ದೇಶದ ರಕ್ಷಣೆಯ ಹೊಣೆಯನ್ನು ರಿಲಯನ್ಸ್ ಕಂಪೆನಿಗೆ ವಹಿಸಲಾಗಿದೆಯೇ? 'ಹಮ್ ದೋ ಹಮಾರೆ ದೋ' ಸರ್ಕಾರ ಅದೆಷ್ಟೇ ಕಣ್ಕಟ್ಟು ನಡೆಸಿದರೂ ಸತ್ಯ ಎಂದಿಗೂ ಸತ್ಯವೇ ಆಗಿರುತ್ತದೆ ಎಂದಿದೆ.
"ಸಮರ್ಪಕ ಲಸಿಕೆ ನೀಡಲಾಗದ ಬಿಜೆಪಿ ಜಾಹೀರಾತುಗಳನ್ನ ಮಾತ್ರ ಎಲ್ಲೆಡೆಯಲ್ಲಿ ಹಾಕಿ ಲಸಿಕೆಯನ್ನ ಪಿಆರ್ ಮೆಟೀರಿಯಲ್ ಮಾಡಿಕೊಂಡಿದೆ ಬಿಜೆಪಿ. ರಾಜ್ಯಾದ್ಯಂತ ಲಸಿಕಾ ಕೇಂದ್ರಗಳ ಮುಂದೆ ಜನತೆ ಲಸಿಕೆಗಾಗಿ ಪರದಾಡುತ್ತಿದ್ದಾರೆ ಎಂದರೆ ರಾಜ್ಯಕ್ಕೆ ಲಸಿಕೆಗಳು ಬರಲಿಲ್ಲವೇ? ಬಂದವು ಎಲ್ಲಿ ಹೋದವು? ಲಸಿಕೆ ಕಾರ್ಯಕ್ರಮದಲ್ಲಿ ಪಾರದರ್ಶಕತೆ ಇಲ್ಲವೇಕೆ?" ಎಂದು ಪ್ರಶ್ನಿಸಿದೆ.
"ನೌಕರರು ಕೆಲಸಕ್ಕೆ ಹೋಗಲು ಲಸಿಕೆ ಪಡೆದಿರಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಲಸಿಕೆ ಪಡೆದಿರಬೇಕು. ವಿದೇಶ ಪ್ರಯಾಣಕ್ಕೆ ಲಸಿಕೆ ಪಡೆದಿರಬೇಕು. ಶಿಕ್ಷಕ ವರ್ಗದವರು ಲಸಿಕೆ ಪಡೆದಿರಬೇಕು. ಎಲ್ಲಾ ಕ್ಷೇತ್ರಗಳು ಮರು ಕಾರ್ಯಾರಂಭ ಮಾಡಲು ಲಸಿಕೆ ಪಡೆದಿರುವುದು ಕಡ್ಡಾಯ ನಿಯಮ ಮಾಡಿರುವ ಸರ್ಕಾರ ಲಸಿಕೆ ನೀಡಲು ಮಾತ್ರ ವಿಫಲಗೊಂಡಿದೆ" ಎಂದು ಆರೋಪಿಸಿದೆ.