ನವದೆಹಲಿ,ಜು 10 (DaijiworldNews/MS): ಟ್ವೀಟರ್ ಗೆ ಪರ್ಯಾಯ ಎಂದೇ ಬಿಂಬಿಸಲ್ಪಟ್ಟಿರುವ ದೇಶಿಯ ಕೂ ಆಪ್ ನಲ್ಲಿ ರಾಷ್ಟ್ರೀಯ ಸ್ವಯ್ಂ ಸೇವಕ ಸಂಘ ಬುಧವಾರ ಖಾತೆ ತೆರೆದಿದೆ ಎಂದು ಕೂ ಘೋಷಿಸಿದೆ. ಈ ಬೆನ್ನಲ್ಲೇ ಆರ್ ಎಸ್ ಎಸ್ ವಕ್ತಾರ ರಾಜೀವ್ ಸಹ ಕೂ ಸೇರಿದ್ದಾರೆ.

ಹೊಸ ಐಟಿ ಕಾಯ್ದೆಯ ವಿಚಾರವಾಗಿ ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ಸಮರಕ್ಕೆ ಇಳಿದಿರುವಾಗಲೇ, ಇತ್ತ ಅದಕ್ಕೆ ಪರ್ಯಾಯವೆಂದು ಬಿಂಬಿತವಾದ ‘ಕೂ’ ಎಂಬ ದೇಶೀ ಆ್ಯಪ್ ಬಹಳ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಈ ನವಜಾತ ತಾಣ, ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ. ಆ್ಯಪ್ನ ಬಳಕೆದಾರರ ಸಂಖ್ಯೆ ಈಗಾಗಲೇ 65 ಲಕ್ಷ ದಾಟಿದೆ. ಕೇಂದ್ರ ಸಚಿವರು, ಕರ್ನಾಟಕದ ಹಲವು ಸಚಿವರು, ಶಾಸಕರು, ಸೆಲೆಬ್ರಿಟಿಗಳು ಕ್ರೀಡಾಪಟುಗಳು ಕೂ ಆ್ಯಪ್ ಬಳಸಲು ಆರಂಭಿಸಿದ್ದಾರೆ
‘ಕೂ’ ಎನ್ನುವುದು ಟ್ವೀಟರ್ ರೀತಿಯ ಒಂದು ಸಾಮಾಜಿಕ ಜಾಲತಾಣ ವೇದಿಕೆಯಾಗಿದ್ದು ಕೂ ಆ್ಯಪ್ 2020ರ ಮಾರ್ಚ್ ನಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲೇ ಅಭಿವೃದ್ಧಿಯಾದ ಆ್ಯಪ್ ಇದಾಗಿದೆ. ಬೆಂಗಳೂರಿನ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡ್ವಟ್ಕಾ ಈ ಆ್ಯಪ್ನ ಸ್ಥಾಪಕರಾಗಿದ್ದಾರೆ.