ಕಣ್ಣೂರು, ಜು.26 (DaijiworldNews/HR): ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಕಣ್ಣೂರಿನ ಪಚ್ಚಯಂಗಾಡಿ ಮೂಲದ ಒಂದೂವರೆ ವರ್ಷದ ಮೊಹಮ್ಮದ್ ಎಂಬ ಬಾಲಕನ ವಿಶೇಷ ಚಿಕಿತ್ಸೆಗೆ 18 ಕೋಟಿ ರೂ. ಬೇಕಾಗಿದ್ದು, ಈ ಬಗ್ಗೆ ಬಾಲಕನ ಸಹೋದರಿ ಅಫ್ರಾ ಸಹಾಯ ಕೋರುವಂತೆ ಕೇಳಿಕೊಂಡ ಬಳಿಕ ಅನೇಕ ದಾನಿಗಳು ಕೈಜೋಡಿಸಿ ಒಟ್ಟು 46.78 ಕೋಟಿ ರೂ ಸಹಾಯ ಮಾಡಿದ್ದಾರೆ.

ಮುಹಮ್ಮದ್ ಮಾತುಲ್ ನಿವಾಸಿ ರಫೀಕ್ ಮತ್ತು ಮರಿಯಮ್ಮ ದಂಪತಿಗಳ ಪುತ್ರನಾಗಿದ್ದು, ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಹತ್ತು ಸಾವಿರ ಜನರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುವ ಅಪರೂಪದ ಕಾಯಿಲೆಯಾಗಿದೆ. ರೋಗದಿಂದಾಗಿ ಮಗುವಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಮುಹಮ್ಮದ್ ಅವರ ಸಹೋದರಿ ಅಫ್ರಾ ಕೂಡ ಇದೇ ರೋಗದಿಂದ ಬಳಲುತ್ತಿದ್ದು, ಆ ಬಳಿಕ ಮೊಹಮ್ಮದ್ ಗೂ ಈ ಕಾಯಿಲೆ ಅಂಟಿಕೊಂಡಿತು.
ಬಾಲಕನ ಚಿಕಿತ್ಸೆಗಾಗಿ 7,77,000 ಜನರು ಎರಡು ಬ್ಯಾಂಕುಗಳ ಮೂಲಕ ಹಣಕಾಸಿನ ವಹಿವಾಟು ನಡೆಸಿದ್ದು, 1 ರಿಂದ ರೂ. 5 ಲಕ್ಷ ರೂ.ಗಳನ್ನು 24 ಜನರು ಮಟ್ಟನೂರ್ ಗ್ರಾಮೀಣ ಬ್ಯಾಂಕ್ ಮೂಲಕ ಮತ್ತು 18 ಜನರು ಕಣ್ಣೂರಿನ ಫೆಡರಲ್ ಬ್ಯಾಂಕ್ ಮೂಲಕ ದಾನ ಮಾಡಿದ್ದಾರೆ.
18 ಕೋಟಿ ರೂ. ಅನ್ನು ಬ್ಯಾಂಕ್ನಿಂದ ತೆಗೆಯಲು ಅಪ್ಲಿಕೇಶನ್ ನೀಡಿದ್ದು, ಈ ವೇಳೆ ತಾಂತ್ರಿಕ ದೋಷದಿಂದ ಹಣ ತೆಗೆಯಲು ತಡವಾಯಿತು.
ಮಗುವಿಗೆ ಚಿಕಿತ್ಸೆ ನೀಡಲು ಸೊಲ್ಜೆನ್ಸ್ಮಾ ಎಂಬ ಔಷಧಿಯ ಒಂದು ಡೋಸ್ ಅಗತ್ಯವಿದ್ದು, ಈ ಔಷಧಿಯನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲು 18 ಕೋಟಿ ರೂ. ಖರ್ಚು ತಗಲುತ್ತದೆ. ಜೊತೆಗೆ ಈ ಔಷಧಿಯನ್ನು ಮುಂದಿನ ನವೆಂಬರ್ ಗೂ ಮೊದಲು ನೀಡಿದರಷ್ಟೇ ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡಿದ್ದರು.
ಬಾಲಕನಿಗೆ ಆಗಸ್ಟ್ ಮೊದಲ ವಾರದಲ್ಲಿ ಚಿಕಿತ್ಸೆ ಪ್ರಾರಂಭವಾಗಲಿದ್ದು, ಕಲ್ಲಿಶ್ಕೇರಿ ಕ್ಷೇತ್ರದ ಶಾಸಕ ಎಂ.ವಿಜಿನ್ ಅವರು ಮೊಹಮ್ಮದ್ ಮತ್ತು ಅಫ್ರಾ ಅವರ ಚಿಕಿತ್ಸೆಗೆ ಬೇಕಾದ ಹಣವನ್ನು ಮೀಸಲಿಡಲಾಗುವುದು ಮತ್ತು ಉಳಿದ ಹಣವನ್ನು ಎಸ್ಎಂಎ(ಸ್ಪೈನಲ್ ಮಸ್ಕಾಲಾರ್ ಅಟ್ರೋಫಿ) ಹೊಂದಿರುವ ಇತರ ಮಕ್ಕಳ ಚಿಕಿತ್ಸೆಗಾಗಿ ಖರ್ಚು ಮಾಡಲಾಗುವುದು ಎಂದು ಹೇಳಿದರು.