ನವದೆಹಲಿ, ಜು 28 (DaijiworldNews/PY): "ಪ್ರಜಾಪ್ರಭುತ್ವ ಹಾಗೂ ಮೂಲ ಸ್ವಾತಂತ್ರ್ಯಕ್ಕೆ ಜಾಗತಿಕ ಬೆದರಿಕೆಗಳು ಹೆಚ್ಚಾಗುತ್ತಿರುವ ಈ ವೇಳೆ ಭಾರತ ಹಾಗೂ ಅಮೇರಿಕಾದಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು" ಎಂದು ಅಮೇರಿಕಾದ ವಿದೇಶಾಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಬುಧವಾರ ತಿಳಿಸಿದ್ದಾರೆ.

ಎರಡು ದಿನಗಳ ಪ್ರವಾಸದಲ್ಲಿರುವ ಆಂಟನಿ ಬ್ಲಿಂಕೆನ್ ಅವರು ಬುಧವಾರ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
"ಸಮಾನ, ಅಂತರ್ಗತ ಹಾಗೂ ಸುಸ್ಥಿರ ಬೆಳವಣಿಗೆ ವಿಚಾರದ ಬಗ್ಗೆ ಭಾರತೀಯ ಸಿವಿಲ್ ಸೊಸೈಟಿ ಸದಸ್ಯ ಜೊತೆ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಆಂಟನಿ ಬ್ಲಿಂಕೆನ್, ಪ್ರಜಾಪ್ರಭುತ್ವವನ್ನು ಹೆಚ್ಚು ಮುಕ್ತ, ನ್ಯಾಯಸಮ್ಮತ ಹಾಗೂ ಅಂತರ್ಗತವಾಗಿಸಲು ಭಾರತ ಹಾಗೂ ಎರಡೂ ದೇಶಗಳಿಗೆ ಕೂಡಾ ನಾಗರಿಕ ಸಮಾಜದ ಬೆಂಬಲ ಬೇಕು" ಎಂದಿದ್ದಾರೆ.
"ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಭಾರತ ಹಾಗೂ ಅಮೇರಿಕಾ ಜೊತೆಯಾಗಿ ಮುನ್ನಡೆಯಬೇಕು. ಇದು ಸವಾಲಿನ ಕೆಲಸ" ಎಂದು ಹೇಳಿದ್ದಾರೆ.