ಜಮ್ಮು, ಆ.02 (DaijiworldNews/HR): ಭಾರತದ ಗಡಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಡ್ರೋನ್ಗಳ ಹಾರಾಟ ಹೆಚ್ಚಾಗುತ್ತಿದ್ದು, ಇದೀಗ ಮತ್ತೆ ಭಾನುವಾರ ತಡರಾತ್ರಿ ಡ್ರೋನ್ ಹಾರಾಟ ಕಂಡು ಬಂದಿದೆ.

ಸಾಂಧರ್ಭಿಕ ಚಿತ್ರ
ಸಂಬಾದ ಬರಿಬ್ರಾಹ್ಮಣ ಪ್ರದೇಶದಲ್ಲಿ ತಡರಾತ್ರಿ ಶಂಕಿತ ಡ್ರೋನ್ ಹಾರಾಟ ನಡೆಸಿದೆ ಎಂದು ಸಾಂಬಾ ಜಿಲ್ಲೆಯ ಪೊಲೀಸ್ ಅಧಿಕಾರಿ ರಾಜೇಶ್ ಶರ್ಮಾ ತಿಳಿಸಿದ್ದಾರೆ.
ಭಾನುವಾರ ಬೆಳ್ಳಗ್ಗೆ ನಾಲ್ಕು ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡಿದ್ದು, ಪೊಲೀಸ್ ಠಾಣೆಯ ಸಮೀಪ ಇಂದು ಡ್ರೋನ್ ಕಂಡುಬಂದರೆ ಇನ್ನೊಂದು ಬಲೋಲ್ ಸೇತುವೆ ಬಳಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.