ಬೆಂಗಳೂರು, ಆ 04 (DaijiworldNews/PY): "ನೂತನ ಸಚಿವರಿಗೆ ಖಾತೆ ಹಂಚಿಕೆ ಒಂದೆರಡು ದಿನಗಳಲ್ಲಿ ಮಾಡಲಾಗುತ್ತದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಸಂಪುಟ ವಿಸ್ತರಣೆ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, "ರಾಜ್ಯದಲ್ಲಿನ ಕೊರೊನಾ ಮೂರನೇ ಅಲೆ ನಿಯಂತ್ರಣ ಹಾಗೂ ಪರಿಹಾರ ಕಾಮಗಾರಿ ನಿರ್ವಹಣೆಗಾಗಿ ಸಚಿವರಿಗೆ ಹೊಣೆಗಾರಿಕೆ ನೀಡಲಾಗುತ್ತದೆ. ನೆರೆಯ ಪರಿಣಾಮ ಸಂತ್ರಸ್ತರಾದಂತವರಿಗೆ ಸ್ಥಳೀಯವಾಗಿಯೇ ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತದೆ" ಎಂದಿದ್ದಾರೆ.
"ನಾಳೆ ಜಿಲ್ಲೆಗಳಿಗೆ ಪ್ರವಾಸ, ಪರಿಹಾರ ಕಾರ್ಯಕ್ಕೆ ಚುರುಕುಗೊಳಿಸಲಾಗುತ್ತದೆ. ಯಾವುದೇ ಸಚಿವರು ಇದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ನೂತನ ಸಚಿವರಿಗೆ ಒಂದೆರಡು ದಿನದಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.