ಬೆಂಗಳೂರು, ಆ.07 (DaijiworldNews/HR): ಶಾಸಕ ಜಮೀರ್ ಅಹ್ಮದ್ ಖಾನ್ಗೆ ಜಾರಿ ನಿರ್ದೇಶನಾಲಯದಿಂದ (ಇಡಿ) ಬುಲಾವ್ ಬಂದಿದ್ದು, ಜಮೀರ್ಗೆ ಹೆಚ್ಎಎಲ್ನಿಂದ ದೆಹಲಿಗೆ ತೆರಳಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಖಾನ್ ಮನೆಗೆ ಇ.ಡಿ. ಅಧಿಕಾರಿಗಳು 2 ದಿನಗಳ ಹಿಂದೆ ದಾಳಿ ನಡೆಸಿದ್ದು, ಇದೀಗ ದೆಹಲಿಗೆ ಬುಲಾವ್ ಬಂದಿರುವ ಹಿನ್ನೆಲೆ ಶಾಸಕ ಜಮೀರ್ಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆವರೆಗೂ ಜಮೀರ್ ಅಹ್ಮದ್ ಖಾನ್ ನಿವಾಸಗಳು, ಕಚೇರಿಗಳ ಮೇಲೆ ಇ.ಡಿ ಅಧಿಕಾರಿಗಳು ನಡೆಸಿದ್ದು, ದಾಳಿ ಬಳಿಕ ಇ.ಡಿ ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ. ಅವರಿಗೆ ಏನೂ ಸಿಕ್ಕಿಲ್ಲ. ನನಗೂ ನೆಮ್ಮದಿ ಸಿಕ್ಕಿದೆ ಎಂದು ಶಾಸಕ ಜಮೀರ್ ಹೇಳಿದ್ದರು.
ಇನ್ನು ದಾಖಲೆಗಳ ಪರಿಶೀಲನೆ ಮುಗಿಸಿರುವ ಇ.ಡಿ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಖಾನ್ಗೆ ನೋಟಿಸ್ ತಕ್ಷಣ ದೆಹಲಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.