ನವದೆಹಲಿ, ಆ. 22 (DaijiworldNews/HR): ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಭಾನುವಾರ 168 ಮಂದಿಯನ್ನು ಭಾರತಕ್ಕೆ ಕರೆತರಲಾಗಿದ್ದು, ಇದರಲ್ಲಿ 107 ಮಂದಿ ಭಾರತೀಯರಿದ್ದಾರೆ.

ಎರಡು ಮಂದಿ ನೇಪಾಳಿ ಪ್ರಜೆಗಳು ಸೇರಿ ಇನ್ನೂ 87 ಮಂದಿಯನ್ನು ತಜಕಿಸ್ತಾನದ ದುಶಾಂಬೆ ಮೂಲಕ ಈಗಾಗಲೇ ನವದೆಹಲಿಗೆ ಕರೆಸಿಕೊಳ್ಳಲಾಗಿದ್ದು, ಕಳೆದ ಕೆಲವು ದಿನಗಳಲ್ಲಿ 135 ಮಂದಿ ಭಾರತೀಯರನ್ನು ಅಮೇರಿಕಾ ಮತ್ತು ನ್ಯಾಟೊ ಪಡೆಗಳ ವಿಮಾನದ ಮೂಲಕ ಅಫ್ಗಾನಿಸ್ತಾನದಿಂದ ತೆರವುಗೊಳಿಸಲಾಗಿದೆ.
ಇನ್ನು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, 107 ಭಾರತೀಯರು ಸೇರಿದಂತೆ 168 ಮಂದಿಯನ್ನೊಳಗೊಂಡ ವಾಯುಪಡೆ ವಿಮಾನ ಕಾಬೂಲ್ನಿಂದ ದೆಹಲಿಗೆ ಬರುತ್ತಿದೆ' ಎಂದು ವಿದೇಶಾಂಗ ಸಚಿವಾಲಯದ ಅರಿಂದಂ ಬಾಗ್ಚಿ ಹೇಳಿದ್ದಾರೆ.