ಬೆಂಗಳೂರು, ಸೆ 01(DaijiworldNews/MS): ಭಾರತೀಯ ಜನತಾ ಪಕ್ಷವೂ ಸಂವಿಧಾನ ವಿರೋಧಿ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತೀಕ್ಷ ತಿರುಗೇಟು ನೀಡಿರುವ ಬಿಜೆಪಿಯೂ, ಅಂಬೇಡ್ಕರ್’ರನ್ನು ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಮಾಡಿದ ಕುತಂತ್ರಗಳ ಪಟ್ಟಿ ಕೊಡಬೇಕೇ ಎಂದು ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯೂ , ಎವಿಡೆನ್ಸ್ ಆಕ್ಟ್ ಎಕ್ಸ್ಪರ್ಟ್ ಸಿದ್ದರಾಮಯ್ಯ ಅವರೇ, ಎಷ್ಟೇ ಸಾಕ್ಷ್ಯ ನಾಶ ಮಾಡಿದರೂ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಮಾಡಿದ ಅನ್ಯಾಯದ ಘಟನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಸುಳ್ಳುಗಳನ್ನು ಪೋಣಿಸಿ ಹೆಣೆದ ನಿಮ್ಮ ಇತಿಹಾಸ ಮರಳಿನ ಸೌಧದಷ್ಟೇ ಕ್ಷಣಿಕ ಎಂಬುದನ್ನು ಮರೆಯದಿರಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸುಳ್ಳುಗಳ ಸರದಾರ ಸಿದ್ದರಾಮಯ್ಯ ಅವರೇ ಸಂವಿಧಾನ ಬರೆದ ಅಂಬೇಡ್ಕರ್ ಅವರಿಗೆ ಜವಾಹರ್ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಮರೆತು ಬಿಟ್ಟಿರಾ?
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಮಾಡಿದ ಕುತಂತ್ರಗಳ ಪಟ್ಟಿ ಕೊಡಬೇಕೇ? ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನೆಹರು ಪರಂಪರೆಯಲ್ಲಿ ತೀವ್ರ ಅಗೌರವ ತೋರಲಾಗಿದೆ ಎಂದು ಹೇಳಿದೆ
ತನ್ನ ಅವಕಾಶವಾದಿ ರಾಜಕಾರಣಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ.ಹಾಗಾದರೆ ನಿಜವಾಗಿಯೂ ಸಂವಿಧಾನ ವಿರೋಧಿ ಯಾರು ಸಿದ್ದರಾಮಯ್ಯ ಅವರೇ ಎಂದು ಕೇಳಿದೆ.