ಪಂಜಾಬ್, ಸೆ. 07 (DaijiworldNews/PY): ನಿಶ್ಚಿತಾರ್ಥ ಸಮಾರಂಭಕ್ಕೆ ವಜ್ರದ ಉಂಗುರ ವಿಷಯವಾಗಿ ವಧು-ವರರ ಕುಟುಂಬಗಳ ನಡುವೆ ಸಂಘರ್ಷ ನಡೆದ ಘಟನೆ ಪಂಜಾಬ್ನ ಜಲಂಧರ್ ನಗರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ವರನ ಮನೆಯವರು ವಜ್ರದ ಉಂಗುರಕ್ಕೆ ಬೇಡಿಕೆ ಇಟ್ಟ ಬಗ್ಗೆ ವಾಗ್ವಾದ ನಡೆದಿದ್ದು, ಕೊನೆಗೆ ಘರ್ಷಣೆಯಲ್ಲಿ ಕೊನೆಗೊಂಡಿದೆ.
ವಾದವು ಎರಡು ಕಡೆಗಳ ನಡುವೆ ಜಗಳವಾಗಿ ಉಲ್ಬಣಗೊಂಡಿದ್ದು, ವಜ್ರದ ಉಂಗುರ ಸಿಗದೇ ಇದ್ದ ಕಾರಣಕ್ಕೆ ವರನ ಕಡೆಯವರು ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದಾರೆ. ಘರ್ಷಣೆಯ ವೇಳೆ ವಧುವಿನ ಮೇಲೆ ವರನ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಬಳಿಕ ವರನ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ವಧುವಿನ ಕುಟುಂದವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ವರ ಹಾಗೂ ಆತನ ಕುಟುಂಬದ ಸದಸ್ಯರನ್ನು ಬಂಧಿಸಸಲು ಶೋಧ ಕಾರ್ಯ ನಡೆಸಿದ್ದಾರೆ.
ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ವರನ ಮನೆಯವರು ನಿಶ್ಚಿತಾರ್ಥಕ್ಕೂ ಮುನ್ನ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಆದರೆ, ನಿಶ್ಚಿತಾರ್ಥದ ಸಂದರ್ಭ ವರನ ಮನೆಯವರು ಬೇಡಿಕೆ ಇಟ್ಟಿದ್ದು, ಎರಡು ವಜ್ರದ ಉಂಗುರಗಳು, ಚಿನ್ನದ ಕಡಗ ಹಾಗೂ ಕಿವಿಯೋಲೆಗಳನ್ನು ಕೇಳಿದ್ದರು. ಇದಾದ ಬಳಿ ಎರಡು ಕಡೆಯವರ ನಡುವೆ ವಾಗ್ವಾದ ಆರಂಭವಾಗಿದ್ದು, ಘರ್ಷಣೆಯಲ್ಲಿ ಕೊನೆಗೊಂಡಿತ್ತು. ಬಳಿಕ ವಿವಾಹದ ಪ್ರಸ್ತಾಪ ಮಾಡಿದ್ದ ಮಧ್ಯವರ್ತಿಯನ್ನು ಹೋಟೆಲ್ಗೆ ಕರೆಸಲಾಯಿತು. ಈಗಾಗಲೇ ಹುಡುಗನಿಗೆ ಇಬ್ಬರು ಮಹಿಳೆಯರೊಂದಿಗೆ ವಿವಾಹವಾಗಿದೆ ಎಂದು ತಿಳಿದುಬಂದಿದೆ.