ಕೋಲ್ಕತ್ತಾ, ಸೆ 09(DaijiworldNews/MS): ಬಂಗಾಳಿ ನಟಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅಂದರೆ ಹೆರಿಗೆಯಾದ ಕೇವಲ ಎರಡು ವಾರದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ನನಗೆ ಮತ ಹಾಕಿದ ಜನರ ಬಗ್ಗೆ ಜವಾಬ್ದಾರಿ ಹೊಂದಿರುವುದರಿಂದ "ಕೆಲಸಕ್ಕೆ ಮರಳಿದ್ದೇನೆ" ಎಂದು ಮಾಧ್ಯಮದ ಮುಂದೆ ಹೇಳಿದರು. ತನ್ನ ಮಗುವಿನ ತಂದೆಯ ಹೆಸರನ್ನು ಹೇಳಲು ನಿರಾಕರಿಸಿದ ನಟಿ -ರಾಜಕಾರಣಿ, ನುಸ್ರತ್ ಜಹಾನ್ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ತಾನು ಸಂಸತ್ತಿಗೆ ಮರಳುತ್ತೇನೆ ಎಂದು ಹೇಳಿದರು.
ನುಸ್ರತ್ ಜಹಾನ್ ಅವರ ಮಗ ಇಶಾನ್ ಆಗಸ್ಟ್ 26 ರಂದು ಜನ್ಮ ನೀಡಿದ್ದರು. ಕಳೆದ ನವೆಂಬರ್ನಲ್ಲಿ ಪತಿಯಿಂದ ಬೇರೆಯಾಗಿಗುವ ನುಸ್ರತ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಟೀಕೆ ಹಾಗೂ ವ್ಯಂಗ್ಯ ಮಾಡಿದ್ದರು.
ಇದೇ ವೇಳೆ ಮಗುವಿನ ತಂದೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ತಪ್ಪಿಸಿಕೊಂಡ ಅವರು "ತಂದೆ ಯಾರೆಂದು ತಂದೆಗೆ ತಿಳಿದಿದೆ. ನಾವು ಈ ಸಮಯದಲ್ಲಿ ಉತ್ತಮ ಪೋಷಕರಾಗಿದ್ದೇವೆ. ನಾನು ಮತ್ತು ಯಶ್ (ದಾಸ್ ಗುಪ್ತ, ನಟ) ನಾವು ಉತ್ತಮ ಸಮಯವನ್ನು ಹೊಂದಿದ್ದೇವೆ" ಎಂದು ಉತ್ತರಿಸಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ನುಸ್ರತ್ ಜಹಾನ್ರನ್ನು ಆಗಸ್ಟ್ 25ರಂದು ಬೆಂಗಾಳಿ ನಟ ಯಶ್ ದಾಸ್ಗುಪ್ತಾ ಕೋಲ್ಕತ್ತದ ನಿಯೋಟಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆಯಾದ ಬಳಿಕವೂ ಕೂಡ, ನುಸ್ರತ್ ಮತ್ತು ಆಕೆಯ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ನುಸ್ರತ್ ಜಹಾನ್ 2019ರ ಜೂನ್ 19ರಲ್ಲಿ ಟರ್ಕಿಯಲ್ಲಿ ನಿಖಿಲ್ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ ಭಾರತದ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು