ಬಿಹಾರ, ಸೆ.15 (DaijiworldNews/PY): ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಗೆ ಆಕಸ್ಮಿಕವಾಗಿ 5.5 ಲಕ್ಷ ರೂ. ಜಮಾ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದಾರೆ ಎಂದು ಹಣ ಹಿಂದಿರುಗಿಸಲು ನಿರಾಕರಿಸಿದ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಭಕ್ತಿಯಾರ್ ಪುರ್ ಗ್ರಾಮದ ರಂಜಿತ್ ದಾಸ್ ಎಂಬವರ ಬ್ಯಾಂಕ್ ಖಾತೆಗೆ ಖಗಾರಿಯಾ ಗ್ರಾಮೀಣ ಬ್ಯಾಂಕ್ ತಪ್ಪಾಗಿ ಜಮಾ ಮಾಡಿದೆ. ಬ್ಯಾಂಕ್ ತನ್ನ ದೋಷವನ್ನು ಅರಿತುಕೊಂಡ ನಂತರ ರಂಜಿತ್ ದಾಸ್ ಅವರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ಗಳನ್ನು ಕಳುಹಿಸಿದ್ದಾರೆ. ಆದರೆ, ರಂಜಿತ್ ದಾಸ್ ಆ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಲ್ಲದೇ, ಹಣವನ್ನು ಖರ್ಚು ಮಾಡಿದ್ದೇನೆ ಎಂದಿದ್ದಾನೆ. ಈ ಹಿನ್ನೆಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
"ನನ್ನ ಖಾತೆಗೆ ಹಣ ಜಮಾ ಮಾಡಿದ ವೇಳೆ ನನಗೆ ಖುಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೋರ್ವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಹಾಗಾಗಿ ಅದರ ಮೊದಲ ಕಂತನ್ನು ಜಮಾ ಮಾಡಿದ್ದಾರೆ ಎಂದು ನಾನು ಭಾವಿಸಿದ್ದೆ. ಎಲ್ಲಾ ಹಣವನ್ನು ನಾನು ಖರ್ಚು ಮಾಡಿದ್ದು, ನನ್ನ ಖಾತೆಯಲ್ಲಿ ಹಣ ಇಲ್ಲ" ಎಂದು ಹೇಳಿದ್ದಾನೆ.