ವಿಜಯಪುರ, ಸ.17 (DaijiworldNews/HR): ಎರಡನೇ ಮಗುವನ್ನು ಸಾಕಲು ಸಾಧ್ಯವಾಗದೇ ಹೆತ್ತ ತಾಯಿಯೊಬ್ಬಳು ಗಂಡು ಮಗುವನ್ನು ಮಾರಾಟ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾಂಧರ್ಭಿಕ ಚಿತ್ರ
8 ದಿನದ ಗಂಡು ಮಗುವನ್ನು ಐದು ಸಾವಿರಕ್ಕೆ ಹೆತ್ತ ತಾಯಿ ನರ್ಸ್ ಮೂಲಕ ಮಾರಾಟ ಮಾಡಿದ್ದು, ಇದಾದ ಎರಡು ದಿನಗಳ ಬಳಿಕ ಮಗು ತಮಗೆ ಬೇಕು ಎಂದು ಬಂದಿದ್ದು ಆಸ್ಪತ್ರೆಗೆ ಬಂದಿದ್ದಾಳೆ. ಈ ವೇಳೆ ಮಗು ಸಿಗದಿದ್ದಾಗ ತಾಯಿಯು ಸಹಾಯವಾಣಿಯ ಮೊರೆ ಹೋಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರೇಣುಕಾ ಕಾಂಬಳೆ ಎಂಬ ಮಹಿಳೆಗೆ ಈಗಾಗಲೇ ಒಂದು ಹೆಣ್ಣು ಮಗು ಇದ್ದು, ಈ ವೇಳೆ ಕಳೆದ ತಿಂಗಳು ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಬಡತನದಲ್ಲಿದ್ದ ರೇಣುಕಾಗೆ ಮಗು ಸಾಕುವುದು ಕಷ್ಟವಾಗಿದೆ. ಇದನ್ನು ತಿಳಿದ ಆಸ್ಪತ್ರೆಯ ನರ್ಸ್ ಕಸ್ತೂರಿ ರೇಣುಕಾಗೆ ಮಗುವನ್ನು ಮಾರಾಟ ಮಾಡಲು ತಿಳಿಸಿದ್ದಾಳೆ. ಇದರಿಂದ ಮಗು ಕೂಡ ಬೇರೆ ಕಡೆ ಚೆನ್ನಾಗಿ ಬೆಳೆಯಲಿದೆ. ನಿಮಗೂ ಹಣ ಸಿಗಲಿದೆ ಎಂದು ತಿಳಿಸಿದ್ದಾಳೆ.
ಇನ್ನು ಜಿಲ್ಲಾಸ್ಪತ್ರೆಯ ನರ್ಸ್ ಹಾಗೂ ಆಕೆಯ ಪತಿಯ ಸಹಾಯದಿಂದ ರೇಣುಕಾ ಕೂಡ ತನ್ನ 8 ದಿನದ ಮಗುವನ್ನು ಮಾರಾಟ ಮಾಡಿದ್ದಾಳೆ. ರೇಣುಕಾ ಗಂಡ ಮಂಜುನಾಥ ಪಡಸಲಗಿ ನರ್ಸ್ ತೋರಿಸಿದ ವ್ಯಕ್ತಿಗೆ ಮಗುವನ್ನು ಜಿಲ್ಲಾಸ್ಪತ್ರೆ ಆವರಣದಲ್ಲೇ ಮಗುವನ್ನು ಮಾರಾಟ ಮಾಡಿದ್ದಾನೆ. ಇದಾದ ಎರಡು ದಿನಗಳ ಬಳಿಕ ಹೆತ್ತ ತಾಯಿಗೆ ಮಗುವನ್ನು ದೂರ ಮಾಡಿದ ಪಾಪ ಪ್ರಜ್ಞೆ ಕಾಡಿದೆ. ಇದೇ ಕಾರಣಕ್ಕೆ ಮಗುವನ್ನು ಹಿಂದಿರುಗಿಸುವಂತೆ ರೇಣುಕಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಆದಾಗಲೇ ಮಗುವನ್ನು ಕೊಂಡು ಕೊಂಡಿದ್ದ ವ್ಯಕ್ತಿ ಇವರ ಸುಳಿವಿಗೆ ಸಿಗದಂತೆ ನಾಪತ್ತೆಯಾಗಿದ್ದಾಳೆ. ಈ ಹಿನ್ನಲೆ ದಿಕ್ಕು ತೋಚದ ತಾಯಿ ಕಡೆಗೆ ಮಕ್ಕಳ ಸಹಾಯವಾಣಿ ಮೊರೆ ಹೋಗಿದ್ದಾಳೆ.
ಪ್ರಕರಣ ಸಂಬಂಧ ನರ್ಸ್ ಕಸ್ತೂರಿ ಹಾಗೂ ಆಕೆಯ ಪತಿ ಮಂಜುನಾಥ್ ಪಡಸಲಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.