ಶ್ರೀನಗರ, ಸೆ.21 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಬುಡಗಾಮ್ನ ಗೊಗೊ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಪತ್ತೆಯಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

ಶ್ರೀನಗರ ವಿಮಾನ ನಿಲ್ದಾಣ, ತಾಂತ್ರಿಕ ನೆರವು ಒದಗಿಸುವ ವಿಮಾನ ನಿಲ್ದಾಣ, ಸೇನೆಯ ಪದಾತಿದಳದ ಜಮ್ಮು ಮತ್ತು ಕಾಶ್ಮೀರದ ಮುಖ್ಯಕಚೇರಿ ಸೇರಿದಂತೆ ರಕ್ಷಣಾ ಪಡೆ ಹಾಗೂ ಸಾರ್ವಜನಿಕರ ಬಳಕೆಯ ಸೂಕ್ಷ್ಮ ಕಟ್ಟಡಗಳಿರುವ ವಲಯಕ್ಕೆ ಸಮೀಪದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳವು ಸ್ಫೋಟಕ ಸಾಧನವನ್ನು ನಾಶಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಬಾರಾಮುಲ್ಲಾದ ಉರಿ ಸೆಕ್ಟರ್ನಲ್ಲಿ ಮೊಬೈಲ್ ದೂರವಾಣಿ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಅನುಮಾನಾಸ್ಪದ ಚಲನವಲನ ಪತ್ತೆಯಾದ ಹಿನ್ನೆಲೆಯಲ್ಲಿ ಸೇನೆಯ ಕೂಂಬಿಂಗ್ ಕಾರ್ಯಾಚರಣೆಗೆ ನೆರವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.