ನವದೆಹಲಿ, ಸೆ.21 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ಗಳು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಧರ್ಭಿಕ ಚಿತ್ರ
ಹೆಲಿಕಾಪ್ಟರ್ ಪತನಗೊಂಡಿದೆ ಅಥವಾ ಗುಡ್ಡದ ಮೇಲೆ ಇಳಿಸುವಾಗ ತೊಂದರೆ ಎದುರಾಗಿರಬಹುದು ಎಂದು ಅಂದಾಜಿಸಲಾಗಿದೆ.
ಶೋಧ ಕಾರ್ಯಾಚರಣೆಗೆ ತಂಡ ಕಳುಹಿಸಲಾಗಿದ್ದು, ಕಾಲು ನಡಿಗೆಯಲ್ಲಿ ಶಿವ ಘರ್ ಧಾರ್ ಪ್ರದೇಶವನ್ನು ತಲುಪಲು ಸುಮಾರು ಒಂದೂವರೆ ತಾಸು ಬೇಕಾಗಬಹುದು. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಬಿದ್ದಿರುವ ಸ್ಥಳವನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು "ನಮಗೆ ಮಾಹಿತಿ ಬಂದ ಕೂಡಲೇ ಪೊಲೀಸರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಉಧಂಪುರದ ಡಿಐಜಿ ಸುಲೆಮಾನ್ ಚೌಧರಿ ತಿಳಿಸಿದ್ದಾರೆ.