ಬೆಂಗಳೂರು,ಸೆ 24 (DaijiworldNews/MS): ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್ ಒಂದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಅಲ್ಪನಿಗೆ ಐಶ್ವರ್ಯ ಸಿಕ್ಕರೆ, ವಿಮಾನದ ಮೆಟ್ಟಿಲಿಳಿಯಲು ಛತ್ರಿ ಬಿಚ್ಚುವನು! ಮೋದಿ ಜೀ ತಮ್ಮ ಪಿ ಆರ್ ಏಜೆನ್ಸಿ ಹೇಳಿದ ಟಾಸ್ಕ್ನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ, ಮಳೆಯಿಲ್ಲ, ಬಿಸಿಲಿಲ್ಲ, ಕೇವಲ 20 ಮೆಟ್ಟಿಲು ಇಳಿಯಲು ಕೂಡ ಛತ್ರಿ ಬಿಚ್ಚಿತ್ತಾರೆ! ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ ವ್ಯಂಗ್ಯವಾಡಿದೆ.
ಇದಕ್ಕೂ ಹಿಂದೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ , " ಫೋಟೋ ಶೂಟ್ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್ ಕಳಪೆಯಾಗಿದೆ, ಟಾರ್ಚ್ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್ಗಾಗಿಯೇ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಮಾಡಿಸಿಕೊಳ್ಳಿ! ಅಂದಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ !? ಎಂದು ಪ್ರದಾನಿ ಮೋದಿ ಕುರಿತು ವ್ಯಂಗ್ಯವಾಡಿತ್ತು.