ಠಾಣೆ, ಅ.10 (DaijiworldNews/PY): ಯುವಕನೋರ್ವನನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿ ಜನರು ಆತನನ್ನು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ.
ಆಟೋ ಚಾಲಕರೋರ್ವರ ಮಗನಾದ ರಮೇಶ್ ಮುರಳಿ ಎನ್ನುವವರನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿ, ಆತನನ್ನು ಹಿಡಿದು ಕಬ್ಬಿಣದ ಸರಳು ಹಾಗೂ ಕೋಲಿನಿಂದ ಪಡೆದು ಪರಾರಿಯಾಗಿದ್ದಾಗಿ ಆರೋಪಿಯೋರ್ವ ತಿಳಿಸಿದ್ದಾನೆ.
ಸ್ಥಳದಲ್ಲೇ ಯುವಕ ಮೃತಪಟ್ಟಿದ್ದಾನೆ. ಘಟನೆಯ ಸಂಬಂಧ ಆರೋಪಿಗಳಲ್ಲಿ ಕೆಲವರನ್ನು ಪತ್ತೆ ಹಚ್ಚಲಾಗಿದೆ. ಆದರೆ, ಇಲ್ಲಿಯವರೆಗೆ ಯಾರನ್ನೂ ಕೂಡಾ ಬಂಧಿಸಿಲ್ಲ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.